Advertisement

ವೀರಶೈವ ಒಳಪಂಗಡ ಒಗ್ಗೂಡಲಿ

07:44 AM Mar 10, 2019 | |

ಹರಿಹರ: ವೀರಶೈವ ಸಮಾಜದ ಒಳಪಂಗಡಗಳ ಮಧ್ಯೆ ಪರಸ್ಪರ ವಿವಾಹ ಸಂಬಂಧಗಳು ಏರ್ಪಟ್ಟಾಗ ಮಾತ್ರ ಸಮಾಜ ಸಂಘಟನೆ ಬಲಾಡ್ಯಗೊಳ್ಳಲು ಸಾಧ್ಯ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.

Advertisement

ನಗರ ಹೊರವಲಯದ ಪಂಚಮಸಾಲಿ ಪೀಠದ ಹರ ದೇವಸ್ಥಾನದಲ್ಲಿ ಶನಿವಾರ ನಡೆದ ವೀರಶೈವ ಮಹಾಸಭಾ ತಾಲೂಕು ಘಟಕದ ಸಂಘಟನೆ ಮತ್ತು ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಧರ್ಮ, ಜಾತಿಗಳಲ್ಲೂ ಪಂಗಡಗಳ ಅಸ್ತಿತ್ವ ಸಹಜ. ಪರಸ್ಪರ
ವಿವಾಹ ಸಂಬಂಧಗಳೇರ್ಪಟ್ಟರೆ ಸಹಬಾಳ್ವೆ ಸುಗಮವಾಗುತ್ತದೆ ಎಂದರು.

ಹಾನಗಲ್‌ ಕುಮಾರಸ್ವಾಮಿಗಳು ದೂರದೃಷ್ಟಿಯಿಂದ ಎಲ್ಲಾ ಒಳಪಂಗಡಗಳನ್ನು ಒಟ್ಟುಗೂಡಿಸಿ ಮಹಾಸಭಾ ಸ್ಥಾಪಿಸಿದರು. ತದನಂತರ ಒಳಪಂಗಡಗಳ ಒಗ್ಗೂಡಿಸುವಿಕೆ ನಿರಂತರವಾಗಿ ನಡೆಯುತ್ತಿದೆ. ವಿದೇಶಗಳಲ್ಲೆಲ್ಲೂ ವೀರಶೈವರಲ್ಲಿ ಒಳಪಂಗಡಗಳು ಅಸ್ತಿತ್ವದಲ್ಲಿಲ್ಲ. ಎಲ್ಲರೂ ವೀರಶೈವ ಅಥವಾ ಬಸವದಳ ಎಂಬ ಹೆಸರಿನಡಿ ಒಗ್ಗಟ್ಟಾಗಿದ್ದಾರೆ. ಸಮಾಜದ ಪ್ರತಿಯೊಬ್ಬರೂ ವೀರಶೈವ ಮಹಾಸಭಾ ಸದಸ್ಯತ್ವ ಪಡೆದು,
ಎಲ್ಲೆಡೆ ಒಗ್ಗಟ್ಟು ಪ್ರದರ್ಶಿಸಬೇಕೆಂದು ಕರೆ ನೀಡಿದರು.

ತಾಲೂಕು ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ ಮಾತನಾಡಿ, ಇಂದಿನಿಂದ ಸದಸ್ಯತ್ವ ನೋಂದಣಿ ಜೊತೆಗೆ ಒಳಪಂಗಡಗಳ ಒಗ್ಗೂಡಿಸುವ ಮಹತ್ತರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ 84 ತಾಲೂಕುಗಳ ಪೈಕಿ ದಾವಣಗೆರೆ ಜಿಲ್ಲೆಯ ಹರಿಹರ ಮತ್ತು ದಾವಣಗೆರೆ ತಾಲೂಕುಗಳಲ್ಲಿ ಮಾತ್ರ ಮಹಾಸಭಾಗೆ ಚುನಾವಣೆ ನಡೆದಿದೆ. ಉಳಿದ ತಾಲೂಕುಗಳಲ್ಲೂ ಸಂಘಟನೆ ಚುರುಕಾಗಬೇಕಿದೆ ಎಂದರು.

ಹಿರಿಯ ಮುಖಂಡ ಎನ್‌.ಜಿ. ನಾಗನಗೌಡ, ಪಾಲಾಕ್ಷಪ್ಪ ಬಣಕಾರ್‌, ಡಿ.ಎಂ.ಹಾಲಸ್ವಾಮಿ ಮಾತನಾಡಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ಗುಳೇದಹಳ್ಳಿ ಶೇಖರಪ್ಪ, ಕುಂಬಾರ ಸಮಾಜದ ಅಧ್ಯಕ್ಷ ಕರಿಬಸಪ್ಪ, ಹಡಪದ ಅಣ್ಣಪ್ಪ ಸಮಾಜದ ಅಧ್ಯಕ್ಷ ಕೆ.ಉಮಾಪತಿ, ಬಣಜಿಗ ಸಮಾಜದ
ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ನೊಣಬ ಸಮಾಜದ ಅಧ್ಯಕ್ಷ ಕೆ.ಎನ್‌. ನಾಗನಗೌಡ, ಸಾಧು ವೀರಶೈವ ಸಮಾಜದ ಎಚ್‌. ಎಂ. ಶಿವಾನಂದಪ್ಪ, ಜಿ.ನಂದಿಗೌಡ್ರು, ಎಚ್‌. ವಿಶ್ವನಾಥಪ್ಪ, ತಿಮ್ಮನಗೌಡ, ಆರ್‌.ಸಿ. ಪಾಟೀಲ್‌, ಚಂದ್ರಶೇಖರ್‌ ಪೂಜಾರಿ, ಬಸವರಾಜ ಓಂಕಾರಿ, ಅನಿತಾ ಪಾಟೀಲ್‌, ಕೆ.ಸಿ. ಪಾಟೀಲ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next