Advertisement
ತಾಲೂಕಾಸ್ಪತ್ರೆಯಲ್ಲಿ ಮಂಗಳವಾರ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಆಯುಷ್ಮಾನ್ ಭಾರತ ನಾಲ್ಕನೇ ವರ್ಷದ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಜಿಪಂ ಸಿಇಒ ಡಾ| ಸುರೇಶ ಇಟ್ನಾಳ ಮಾತನಾಡಿ, ಮೇಳದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಯೋಜನೆಗಳ ಕುರಿತು ಸಾರ್ವಜನಿಕರಿಗೆ ವಿಸ್ತಾರವಾದ ಮಾಹಿತಿ ನೀಡುವುದರ ಜೊತೆಗೆ ಅವಶ್ಯಕ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಹಾಗೂ ಔಷಧೋಪಚಾರವನ್ನು ನೀಡಲಾಗುವುದು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿ ಆರೋಗ್ಯ ಕಾರ್ಡ್‌ಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುವುದು. ಎಬಿಎಆರ್‌ಕೆ ಕಾರ್ಡ್ ಹಾಗೂ ಹೆಲ್ತ್ ಐಡಿ ಡಿಜಿಟಲ್ ಕಾರ್ಡ್‌ಗಳನ್ನು ಪ್ರತಿಯೊಬ್ಬರೂ ಪಡೆದುಕೊಂಡು ತಮ್ಮ ಆರೋಗ್ಯದ ಎಲ್ಲ ಇತಿಹಾಸವನ್ನು ಒಂದೆಡೆ ಸಂಗ್ರಹಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಬಸನಗೌಡ ಕರಿಗೌಡರ ಪ್ರಾಸ್ತಾವಿಕ ಮಾತನಾಡಿ, ಸಮಾಜದ ಕಟ್ಟಕಡೆ ವ್ಯಕ್ತಿಗೂ ಉತ್ತಮ ಆರೋಗ್ಯ ಒದಗಿಸಬೇಕೆಂಬ ಸರಕಾರದ ಚಿಂತನೆಯನ್ವಯ ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ ಉಚಿತ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಪ್ರಥಮವಾಗಿ ಕಲಘಟಗಿಯಲ್ಲಿ ಆರಂಭಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಕುಟುಂಬದ ಎಲ್ಲರಿಗೂ ಆರೋಗ್ಯ ರಕ್ಷಣೆ ನೀಡಲಾಗುತ್ತಿದೆ ಎಂದರು.
ಪಪಂ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ, ಉಪಾಧ್ಯಕ್ಷೆ ಯಲ್ಲವ್ವ ಶಿಗ್ಲಿ, ಸದಸ್ಯರಾದ ಗಂಗಾದರ ಗೌಳಿ, ಸುನೀಲ ಗಬ್ಬೂರ, ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ, ತಾಪಂ ಇಒ ಎಸ್.ಸಿ. ಮಠಪತಿ, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ತಾಲೂಕು ಆರೋಗ್ಯಾಧಿಕಾರಿ ಡಾ| ಬಸವರಾಜ ಬಾಸೂರ, ಮುಖ್ಯ ವೈದ್ಯಾಧಿಕಾರಿ ಡಾ| ಗಿರೀಶ ಮರಡ್ಡಿ, ಡಾ| ಎಸ್.ಬಿ. ನಿಂಬಣ್ಣವರ ಇನ್ನಿತರರಿದ್ದರು.
ಮುಖ್ಯ ಶಿಕ್ಷಕ ಉಳ್ಳಾಗಡ್ಡಿ ನಿರೂಪಿಸಿದರು. ಡಾ| ಎಸ್.ಎನ್. ಗಿಡ್ಡಣ್ಣವರ ಸ್ವಾಗತಿಸಿದರು. ಡಾ| ರವಿ ಸೋಮಣ್ಣವರ ವಂದಿಸಿದರು.
ಶಿಬಿರದಲ್ಲಿ 1554 ಜನರಿಂದ ನೋಂದಣಿ: ಶಿಬಿರದಲ್ಲಿ 1554 ಜನರು ಹೆಸರನ್ನು ನೋಂದಾಯಿಸಿದ್ದರು. 618 ಜನರಿಗೆ ಎಬಿಎಆರ್‌ಕೆ ಕಾರ್ಡ್ ವಿತರಣೆ, 170 ಜನರ ಹೆಲ್ತ್ ಐಡಿ ಕಾರ್ಡ್ ವಿತರಣೆ, 570 ಜನರ ವಿವಿಧ ರೀತಿಯ ರಕ್ತಪರೀಕ್ಷೆ, 343 ಜನರ ಬಿಪಿ-ಶುಗರ್ ಪರೀಕ್ಷೆ, 43 ಜನರ ಚರ್ಮರೋಗ ತಪಾಸಣೆ, 109 ಮಹಿಳೆಯರ ಪ್ರಸೂತಿ ಮತ್ತು ಸ್ತ್ರೀರೋಗ ಪರೀಕ್ಷೆ, 50 ಜನರ ದಂತಚಿಕಿತ್ಸೆ, 109 ಜನರ ಕಣ್ಣು ತಪಾಸಣೆ ನಡೆಸಿ 38 ಜನರಿಗೆ ಕನ್ನಡಕ ನೀಡಿ 35 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಸೂಚಿಸಲಾಯಿತು.
ನಾಳೆ ಕುಂದಗೋಳದಲ್ಲಿ ಆರೋಗ್ಯ ಮೇಳ:
ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಆಯುಷ್ಮಾನ್ ಭಾರತ ನಾಲ್ಕನೇ ವರ್ಷದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಆರೋಗ್ಯ ಮೇಳವನ್ನು ಏ. 28ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವರೆಗೆ ಕುಂದಗೋಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಆರೋಗ್ಯ ತಪಾಸಣೆ, ರೋಗ ಪತ್ತೆ, ಚಿಕಿತ್ಸೆ ಹಾಗೂ ಆರೋಗ್ಯ ವರ್ಧಕ ಸಲಹೆಗಳನ್ನು ಉಚಿತವಾಗಿ ನೀಡಲಾಗುವುದು. ಮೇಳದಲ್ಲಿ ನೋಂದಣಿ, ಡಿಜಿಟಲ್ ಐಡಿ ರಚನೆ ಉಚಿತವಾಗಿ ಮಾಡಲಾಗುವುದು. ತಜ್ಞ ವೈದ್ಯರು, ವೈದ್ಯಾಧಿಕಾರಿಗಳು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರಿಂದ ಟೆಲಿಕನ್ಸಲ್ಟೆàಶನ್ ಮೂಲಕ ಉಚಿತ ಸಲಹೆ ದೊರೆಯಲಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ, ಗರ್ಭಕೋಶ ಕಂಠ ಮತ್ತು ಸ್ತನ ಕ್ಯಾನ್ಸರ್ ಮುಂತಾದವುಗಳ ಉಚಿತ ನೋಂದಣಿ, ತಪಾಸಣೆ ಮತ್ತು ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಬಸನಗೌಡ ಕರಿಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.