Advertisement

ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

02:58 PM Oct 25, 2018 | Team Udayavani |

ಗುಡಿಬಂಡೆ: ವಾಲ್ಮೀಕಿ ಎಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಗುಣವನ್ನು ಜೀವನದಲ್ಲಿ ಅಳವಡಿಸಿ ಕೊಂಡು ಎಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಶಾಸಕ ಸುಬ್ಟಾರೆಡ್ಡಿ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾನ್‌ ಪುರುಷರ ದಿನಾಚರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ಇಡೀ ಜೀವನದಲ್ಲಿ ಮಹಾನ್‌ ನಾಯಕರ ಆದರ್ಶಗಳನ್ನು ಪಾಲಿಸಬೇಕು. ಯುವಕರಿಗೆ ವಾಲ್ಮೀಕಿ ಮಹರ್ಷಿ ಆದರ್ಶವಾಗಿದ್ದಾರೆ. 

ಅವರು ಯಾವುದೇ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ವಾಲ್ಮೀಕಿ ಜಯಂತಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ರಾಮಾಯಣದಂತಹ ಕಾವ್ಯಗಳನ್ನು ಅಭ್ಯಾಸ ಮಾಡಿಸಬೇಕು. ಜನಪ್ರತಿನಿಧಿಗಳು ಹಾಗೂ ಮುಖಂಡರುಗಳು ಅರ್ಹರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಈಗಾಗಲೇ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಅನುದಾನ ಬಿಡುಗಡೆಯಾಗಿದ್ದು, ನಿಗದಿಪಡಿಸಿರುವ ಜಾಗದಲ್ಲಿ ಕಾಮಗಾರಿ ಕೆಲಸಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಿಕ್ಷಕ ಪಿ.ಎನ್‌ ರಾಜಶೇಖರ್‌ ಮಾತನಾಡಿ, ಮಹಾಕಾವ್ಯ ರಾಮಾಯಣವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯನ್ನು ಮರೆಯುವಂತಿಲ್ಲ. ರಾಮಾಯಣ, ಮಹಾಭಾರತದ ಸಂದೇಶ ಜೀವನಕ್ಕೆ ದಾರಿದೀಪವಾಗಿದೆ ಎಂದು ತಿಳಿಸಿದರು.

ಈ ವೇಳೆ ತಾಲೂಕಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಹಾಗೂ ಗ್ರಾಪಂ ಮತ್ತು ವಾಲ್ಮೀಕಿ ಸಮುದಾಯದ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಹೊಸ ಬಸ್‌ ನಿಲ್ದಾಣದಿಂದ ಮೆರವಣಿಗೆ ನಡೆಯಿತು. ಪಪಂ ಅಧ್ಯಕ್ಷ ದ್ವಾರಕನಾಥ್‌ ನಾಯ್ಡು, ಜಿಪಂ ಸದಸ್ಯೆ ವರಲಕ್ಷ್ಮೀ, ತಾಪಂ ಅಧ್ಯಕ್ಷೆ ವರಲಕ್ಷ್ಮೀ, ತಾಪಂ ಉಪಾಧ್ಯಕ್ಷ ಬೈರಾರೆಡ್ಡಿ, ಸದಸ್ಯೆ ಮಧುಶ್ರೀ, ಆದಿನಾರಾಯಣಪ್ಪ, ಪಪಂ ಮುಖ್ಯಾಧಿಕಾರಿ ನಾಗರಾಜ್‌, ಪ್ರಭಾರಿ ಸಿಇಒ ರವಿಕುಮಾರ್‌, ಕೆಡಿಪಿ ಸದಸ್ಯ ಕೃಷ್ಣೇಗೌಡ, ಎಚ್‌. ನರಸಿಂಹರೆಡ್ಡಿ, ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಗಂಗಾಧರ, ಹರಿಕೃಷ್ಣ, ಸಮುದಾಯದವರಾದ ನರೇಂದ್ರ, ಶ್ರೀನಿವಾಸ್‌, ನಾಗರಾಜ್‌, ಶ್ರೀಕಾಂತ್‌, ಬಾಲಾಜಿ, ಬಿ.ಸಿ ನಾರಾಯಣಪ್ಪ, ಮೂರ್ತಿ, ಮಧು, ಶಂಕರಪ್ಪ, ರಾಮಾಂಜಿ, ಮಂಜುನಾಥ, ಆದಿನಾರಾಯಣ, ಗಂಗರಾಜು, ಮಹೇಶ್‌, ಗೋವಿಂದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next