ಮುಡಿಪು: ಜೋಗಿ ಸಮಾಜವು ಸಂಘಟಿತವಾಗಿ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ವಿಟ್ಲ ಯೋಗೇಶ್ವರ (ಜೋಗಿ) ಮಠಾಧೀಶ ರಾಜಯೋಗಿ ಸರ್ದಾನಾಥಜೀ ಹೇಳಿದರು.
ಮುಡಿಪು ಆಡಿಟೋರಿಯಂನಲ್ಲಿ ಜೋಗಿ ಸಮಾಜ ಸಂಘ ಮುಡಿಪು ವಲಯವನ್ನು ಉದ್ಘಾಟಿಸಿ ಅವರು ಆಶೀರ್ವಚನವಿತ್ತರು.
ನೂತನ ಅಧ್ಯಕ್ಷರಾಗಿ ಸತೀಶ್ ಕುಮಾರ್ ಬದಿಯಾರ್, ಉಪಾಧ್ಯಕ್ಷರಾಗಿ ಭುಜಂಗ ಕಣಂತೂರು, ಕಾರ್ಯದರ್ಶಿಯಾಗಿ ಜನಾರ್ದನ ಪುರುಷ, ಉಪ ಕಾರ್ಯದರ್ಶಿಗಳಾಗಿ ಭಾಸ್ಕರ ಕೊಪ್ಪಲ ಮತ್ತು ತೀರ್ಥ ನಾಥ್ ಜೋಗಿ, ಸಂಘ ಟನ ಕಾರ್ಯದರ್ಶಿಯಾಗಿ ಹರೀಶ್ ಕೂಟತ್ತಜೆ, ಕೋಶಾಧಿ ಕಾರಿಯಾಗಿ ಜನಾರ್ದನ ಕಂಬಳಪದವು ಆಯ್ಕೆಯಾದರು. ರುಕ್ಮಯ ಜೋಗಿ ಅವರನ್ನು ಗೌರವಾಧ್ಯಕ್ಷರಾಗಿ ಹಾಗೂ ಸಂಜೀವ ಜೋಗಿ ಕೂಟತ್ತಜೆ ಅವರನ್ನು ಮಾರ್ಗದರ್ಶ ಕರನ್ನಾಗಿ ನೇಮಿಸಲಾಯಿತು.
ಸತೀಶ್ ಕುಮಾರ್ ಬದಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕ. ಜೋ.ಸ.ಸು.ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕೋಶಾಧಿಕಾರಿ ಎಚ್ ಕೆ. ಪುರುಷೋತ್ತಮ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹರಿನಾಥ್ ಜೋಗಿ, ಪುತ್ತೂರು ಜೋಗಿ ಸಮಾಜ ಸಂಘದ ಅಧ್ಯಕ್ಷ ಮೋನಪ್ಪ ಪುರುಷ ಮತ್ತು ವಿಟ್ಲ ಜೋಗಿ ಸಮಾಜ ಸಂಘದ ಅಧ್ಯಕ್ಷ ನಾಗೇಶ್ ಜೋಗಿ ಪಾಲ್ಗೊಂಡಿದ್ದರು. ಗೋಪಾಲ್ ಜೋಗಿ, ಪದ್ಮನಾಭ ಜೋಗಿ, ಕ.ಜೋ. ಸ. ಸು. ಸಂಘದ ಉಪಾಧ್ಯಕ್ಷ ಡಾ| ಪಿ. ಕೇಶವನಾಥ್, ಕಾರ್ಯದರ್ಶಿ ಗಂಗಾಧರ್ ಬಿ., ಸತೀಶ್ ಮಾಲೆಮಾರ್ ಉಪಸ್ಥಿತರಿದ್ದರು. ಅನಿತ್ರಷಾ ಬಿ. ಪ್ರಾರ್ಥನೆಗೈದರು. ದೀಕ್ಷಿತ್ ಜೋಗಿ ನಿರೂಪಿಸಿ, ಆನಂದ ಜೋಗಿ ವಂದಿಸಿದರು.