Advertisement

ದೇವರ ಧ್ಯಾನದಿಂದ ಅಕ್ಷಯ ಪುಣ್ಯ

03:16 PM Apr 20, 2018 | Team Udayavani |

 ಮುಂಬಯಿ: ಅಕ್ಷಯ ತೃತೀಯ ದಿವಸದ ಪ್ರಯುಕ್ತ ಸರ್ವ ಭಕ್ತರು ವಿಶೇಷವಾಗಿ ದೇವಸ್ಥಾನಗಳಿಗೆ ಹೋಗಿ ರಾಯರ ಅಂತರ್ಯಾಮಿಯಾಗಿ ಇರತಕ್ಕಂತಹ ಮೂಲ ರಾಮಚಂದ್ರ ದೇವರನ್ನು ಸ್ತುತಿಸಿ ಶ್ರೀದೇವಿ, ಭೂದೇವಿ ಸಹಿತನಾದಂತಹ ವೆಂಕಟೇಶ ದೇವರಲ್ಲಿ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿ, ಪ್ರಾರ್ಥನೆಗೈದಾಗ ನಮಗೆ ಅಕ್ಷಯ ಪುಣ್ಯ ಲಭಿಸುತ್ತದೆ. ಆದ್ದರಿಂದ ಇವತ್ತಿನ ದಿವಸ ಯಾವ ಭಕ್ತರು ಬಂದು ವಿಶೇಷವಾಗಿ ದಾನ, ಧರ್ಮ ಮತ್ತು ಪೂಜಾಧಿಗಳನ್ನು ಮಾಡುತ್ತಾರೋ ಅವರಿಗೆ ಅಕ್ಷಯ ಲಭಿಸುತ್ತದೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಇದು ನಮ್ಮಲ್ಲಿರುವ ಮೂಢ‌ನಂಬಿಕೆಯಾಗಿದೆ ಎಂದು ಜೋಗೇಶ್ವರಿ ಮಂತ್ರಾಲಯ ಶಾಖೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಂಸ್ಕೃತ ಶಿಕ್ಷಕ, ಮ್ಯಾನೇಜರ್‌ ಜಯತೀರ್ಥಾಚಾರ್‌ ಅವರು ನುಡಿದರು.

Advertisement

ಎ. 18 ರಂದು ಜೋಗೇಶ್ವರಿ ಪಶ್ಚಿಮ ಗುಲ್ಶನ್‌ ನಗರದ ಮಂತ್ರಾಲಯ ಶಾಖೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಕ್ಷಯ ತೃತೀಯ ಅಂಗವಾಗಿ ಆಯೋಜಿಸಲಾಗಿದ್ದ ಸಂಪೂರ್ಣ ಗಂಧಲೇಪನ ಕಾರ್ಯಕ್ರಮದ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಇಂದಿನ ದಿವಸ ವಿಶೇಷವಾಗಿ ದೇವರ ದರ್ಶನ, ಅರ್ಚನೆ, ಪೂಜೆ, ಹಿರಿಯರ ಆಶೀರ್ವಾದ ಪಡೆಯುವುದರಿಂದ ಒಳಿತಾಗುತ್ತದೆ. ಇಂದಿನ ದಿನ ನಾವು ಅಲ್ಪ ಸ್ವಲ್ಪ ದಾನಧರ್ಮಗಳನ್ನು ಮಾಡಿದಾಗ ಅಕ್ಷಯ ಭಾಗದ ಫಲವನ್ನು ಪಡೆಯಬಹುದು. ಅಕ್ಷಯಫಲ ನಮಗೆ ಸಿಕ್ಕಾಗ ಇಡೀ ವರ್ಷವೂ ಒಳಿತಾಗುತ್ತದೆ. ಭಕ್ತಾದಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.

ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6 ರಿಂದ ಗುರುರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ಗುರುರಾಯರ ಪಾದಪೂಜೆ, ಗಂಧಲೇಪನ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನಪ್ರಸಾದವನ್ನು ಆಯೋಜಿಸಲಾಗಿದ್ದು, ಸಾವಿರಾರು ಭಕ್ತಾದಿಗಳು ವಿವಿಧೆಡಗಳಿಂದ ಆಗ ಮಿಸಿ ದೇವರ ದರ್ಶನ ಪಡೆದರು.

ಶ್ರೀ ಮಠದ ಪ್ರಧಾನ ಅರ್ಚಕ ಗುರುರಾಜಾಚಾರ್ಯ ಹಾಗೂ ರಾಘವೇಂದ್ರಚಾರ್ಯ ಅವರು ವಿವಿಧ ಪೂಜಾ ವಿಧಿ-ವಿಧಾನಗಳನ್ನು ನೆರ ವೇರಿಸಿದರು. ಜಯ ತೀರ್ಥಾಚಾರ್‌, ನರಸಿಂಹನ್‌ ಇವರು ಪೂಜಾ ಸಂದರ್ಭದಲ್ಲಿ ಸಹಕರಿಸಿದರು. ಮೀರಾರೋಡ್‌ ರಾಯರ ಬಳಗದ ಗಿರೀಶ್‌ ಕರ್ಕೇರ, ಪುರಂದರ ಅಮೀನ್‌, ಸಂಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಜಯತೀರ್ಥಚಾರ್‌  ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next