Advertisement

ಜೋಗೇಶ್ವರಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ 

04:44 PM Sep 02, 2018 | |

ಮುಂಬಯಿ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 347 ನೇ ಆರಾಧನಾ ಮಹೋತ್ಸವವು ಆ. 29 ರಂದು ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ವಿವಿಧ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

ಶ್ರಾವಣ ಬಹುಳ ದ್ವಿತೀಯ ದಿನದಂದು ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನಾಸ್ಥರಾಗಿರುವ ದಿನವನ್ನು ಮಧ್ಯಾರಾಧನೆ ಉತ್ಸವವಾಗಿ ಆಚರಿಸಲಾಗುತ್ತಿದೆ. ಈ ದಿನ ರಾಯರಿಗೆ  ನೈರ್ಮಲ್ಯ ವಿಸರ್ಜನೆ, ವೇದ ಪಾರಾಯಣ, ಪ್ರಹ್ಲಾದಾ ಚಾರ್ಯರ ಸಾಮೂಹಿಕ ಪಾದಪೂಜೆ, ಫಲ ಪಂಚಾಮೃತ ಅಭಿಷೇಕ, ರಾಘವೇಂದ್ರ ಸ್ವಾಮಿ ಮಹಿಮಾ ಭಜನೆ, ಪಾದಪೂಜೆ, ಸರ್ವ ಸೇವಾ ಪೂಜೆ, ರಥೋತ್ಸವ, ಕನಕ ಮಹಾಪೂಜೆ, ಅಲಂಕಾರ ಪೂಜೆ, ಅಷೊuàಧಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಮಂತ್ರಾಕ್ಷತೆ ಪೂಜೆಯು ವಿವಿಧ ವಿಧಿ-ವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಮಠದ ಪ್ರಬಂಧಕರಾದ ಜಯ ತೀರ್ಥಾಚಾರ್‌ ಅವರು ನೆರೆದ ಭಕ್ತಾದಿಗಳಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯ ಬಗ್ಗೆ ತಿಳಿಸಿ, ಆಶೀರ್ವಚನ ನೀಡಿ, ಶ್ರೀ ಮಂತ್ರಾಲಯದ ಬೃಂದಾನವು ಸುಮಾರು 700 ಸಾಲಿಗ್ರಾಮದಿಂದ ಸ್ಥಾಪಿಸಲ್ಪಟ್ಟಿದ್ದು, ದೇಶದ ಎರಡನೇ ಬೃಹತ್‌ ಬೃಂದಾವನವು ಈ ಮಹಾನಗರದಾಗಿದ್ದು, ಇದು 500 ಸಾಲಿಗ್ರಾಮಗಳಿಂದ ಸ್ಥಾಪಿಸಲ್ಪಟ್ಟಿದೆ. ಆದ್ದರಿಂದಲೇ ಇದನ್ನು ಅಭಿನವ ಮಂತ್ರಾಲಯ ಎಂದು ನಾಮಕರಣಗೊಳಿಸಲಾಗಿದೆ. 

ಈ ಮೂಲಕ ಸರ್ವ ಭಕ್ತರ ಇಷ್ಟಾರ್ಥಗಳನ್ನು  ಪೂರೈಸುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ಶ್ರೀರಾಮನ ಪರಮ ಭಕ್ತರು, ಸ್ತೋತ್ರ ಹಾಗೂ ಚಿಂತನೆಯಿಂದ ಬರುವ ಪ್ರತಿಯೋರ್ವ ಭಕ್ತರಿಗೆ ಅನುಗ್ರಹ ನೀಡಿ ರಾಯರು ಹರಸುತ್ತಾರೆ. ಇಲ್ಲಿ ದೊರೆಯುವ ಮಂತ್ರಾಕ್ಷತೆಯು ಅದ್ಭುತವಾದ ಮಹಿಮೆ ಹೊಂದಿದ್ದು, ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತೆ ವಿನಂತಿಸಿದರು.

ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಮಹಾನಗರದ ಭಕ್ತಾದಿಗಳು ಪಾಲ್ಗೊಂಡು ವಿವಿಧ ಪೂಜೆ ಹಾಗೂ ಸೇವೆಯನ್ನು ಅರ್ಪಿಸಿದರು. ನಗರದ ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಉದ್ಯಮಿಗಳು ಪಾಲ್ಗೊಂಡು  ಶ್ರೀ ರಾಘವೇಂದ್ರ ಸ್ವಾಮಿಗಳ  ಅನುಗ್ರಹಕ್ಕೆ ಪಾತ್ರರಾದರು.

Advertisement

ಶ್ರೀ ಮಂತ್ರಾಲಯದ ಪೀಠಾಧೀಪತಿ ಶ್ರೀ ಸುಬುದೇಂದ್ರ ತೀರ್ಥ ಶ್ರೀಗಳ ಶುಭಾಶೀರ್ವಾ ದಗಳೊಂದಿಗೆ ನಡೆದ ಉತ್ಸವವು ಮಠದ ಮುಖ್ಯ ಅರ್ಚಕ ಗುರುರಾಜ ಆಚಾರ್‌ ಮತ್ತು ಬಳಗದವರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಪೂರ್ಣಪ್ರಜ್ಞ, ಮಠದ ಆಡಳಿತ ವರ್ಗದವರು ಆರಾಧನೆಯ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next