ಲಕೋನಿಯಾ:ಮತ್ತೊಂದು ಅವಧಿಗೆ ಅಮೆರಿಕದ ಅಧ್ಯಕ್ಷರಾಗಬೇಕು ಎಂದು ಬಯಸುತ್ತಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ಗೆ ಅವರದ್ದೇ ಪಕ್ಷದಿಂದ ಅಪಸ್ವರ ಕೇಳಿಬಂದಿದೆ.ಮತ್ತೊಮ್ಮೆ ಅವರು ಕಣಕ್ಕಿಳಿಯುವುದು ಬೇಡ ಎಂದು ಡೆಮಾಕ್ರಾಟ್‌ಗಳೇ ಹೇಳಲಾರಂಭಿಸಿದ್ದಾರೆ.
ವಿಶೇಷವೆಂದರೆ, ಬೈಡೆನ್ ಅವರ ಅತ್ಯಾಪ್ತರಾದ ಸ್ಟೀವ್ ಶರ್ಲೆಫ್ ಅವರೂ ಈ ಕೂಗಿಗೆ ಧ್ವನಿಗೂಡಿಸಿದ್ದಾರೆ. “ಬಹುತೇಕ ಮಂದಿ ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಆದರೆ, ನಾನು ನೇರವಾಗಿ ಹೇಳುತ್ತಿದ್ದೇನೆ. ಬೈಡೆನ್ ಅವರಿಗೆ ಒಂದು ಅವಧಿ ಸಾಕು. ಮತ್ತೂಂದು ಬಾರಿ ಅವರು ಸ್ಪರ್ಧಿಸುವುದು ಬೇಡ’ ಎಂದು ಶರ್ಲೆಫ್ ಹೇಳಿದ್ದಾರೆ.
2019ರಲ್ಲಿ ಅಧ್ಯಕ್ಷೀಯ ಹುದ್ದೆಗೆ ನಾಮಪತ್ರ ಸಲ್ಲಿಸುವ ವೇಳೆ ಬೈಡೆನ್ ಜತೆಗೇ ಸ್ಟೀವ್ ಶರ್ಲೆಫ್ ಇದ್ದರು. ಪ್ರಾಥಮಿಕ ಮತದಾರರನ್ನು ಸೆಳೆಯುವ ಸಲುವಾಗಿ ಬೈಡೆನ್ ಎಲ್ಲ ಪ್ರಾಂತ್ಯಗಳಲ್ಲೂ ಪ್ರಚಾರ ನಡೆಸುತ್ತಿದ್ದಾಗಲೂ ಅವರೊಂದಿಗೇ ಶರ್ಲೆಫ್ ಸುತ್ತಿದ್ದರು.
ಅಮೆರಿಕದ ಶೇ.37ರಷ್ಟು ಡೆಮಾಕ್ರಾಟ್‌ಗಳು ಬೈಡೆನ್ ಎರಡನೇ ಅವಧಿಗೆ ಸ್ಪರ್ಧಿಸಲಿ ಎಂದು ಹೇಳುತ್ತಿದ್ದಾರೆ. ಕಳೆದ ವರ್ಷದ ಮಧ್ಯಂತರ ಚುನಾವಣೆ ವೇಳೆ ಈ ಪ್ರಮಾಣ ಶೇ.52ರಷ್ಟಿತ್ತು.