Advertisement

ವ್ಯೂಹಾತ್ಮಕ ಸಂಗ್ರಹದಿಂದ ತೈಲ ಬಿಡುಗಡೆ

11:08 PM Mar 31, 2022 | Team Udayavani |

ವಾಷಿಂಗ್ಟನ್‌: ಉಕ್ಕೇನ್‌ ಬಿಕ್ಕಟ್ಟಿನ ನಡುವೆಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ದೇಶದ ವ್ಯೂಹಾತ್ಮಕ ಸಂಗ್ರಹಣಾ ಕೇಂದ್ರದಿಂದ ಪ್ರತಿ ದಿನ 10 ಲಕ್ಷ ಬ್ಯಾರೆಲ್‌ವರೆಗೆ ಕಚ್ಚಾ ತೈಲ ಬಿಡುಗಡೆ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ದೇಶದಲ್ಲಿ ಪೆಟ್ರೋ­ಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗದಂತೆ ತಡೆಯಲು ಕ್ರಮ ಕೈಗೊಂಡಿದ್ದಾರೆ.

Advertisement

ಮುಂದಿನ ಕೆಲವು ತಿಂಗಳವರೆಗೆ ವ್ಯೂಹಾತ್ಮಕ ಸಂಗ್ರಹದಿಂದ ಕಚ್ಚಾ ತೈಲ ಬಿಡುಗಡೆಯಾಗಲಿದೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇದೇ ವೇಳೆ, ಒಪೆಕ್‌ ಮತ್ತು ಮಿತ್ರರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸಲು ಒಪ್ಪಿಕೊಂ­ಡಿಲ್ಲ. 2020ರಲ್ಲಿ ಕೊರೊನಾ ಸೋಂಕು ಧಾಂಗುಡಿ ಶುರುವಾದ ಬಳಿಕ ಕಚ್ಚಾ ಉತ್ಪಾದನೆ ಕಡಿತ­ಗೊಳಿಸಿದ್ದವು. ನಂತರ ಅದನ್ನು ಹೆಚ್ಚು ಮಾಡಲು ಬೇಡಿಕೆ ಬಂದಿ­ದ್ದರೂ, ಅವುಗಳು ಒಪ್ಪಿಕೊಂಡಿಲ್ಲ.

ಭಾರತದ ಬೆಂಬಲ: ತನ್ನ ಮೀಸಲಿನಿಂದ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲ ಬಿಡುಗಡೆ ಮಾಡುವ ಅಮೆರಿಕದ ನಿರ್ಧಾರವನ್ನು ಭಾರತ ಸ್ವಾಗತಿಸಿದೆ. ದರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡ ಈ ಕ್ರಮವನ್ನು ನಾವು ಬೆಂಬಲಿ­ಸುತ್ತೇವೆ ಎಂದು ಕೇಂದ್ರ ಪೆಟ್ರೋ­ಲಿಯಂ ಖಾತೆ ಸಹಾಯಕ ಸಚಿವ ರಾಮೇಶ್ವರ್‌ ತೇಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, “ಪ್ರಸ್ತುತ ಸಂದರ್ಭದಲ್ಲಿ ಯಾವುದು ಅಗತ್ಯವೋ ಅಂಥ ನಿರ್ಧಾರ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಕಚ್ಚಾ ತೈಲ ಬೆಲೆ ಇಳಿಸುವ ನಿಟ್ಟಿನಲ್ಲಿ ವ್ಯೂಹಾತ್ಮಕ ಸಂಗ್ರಹದಿಂದ ತೈಲ ಬಿಡುಗಡೆ ಮಾಡುವ ಅಮೆರಿಕದ ನಿರ್ಧಾರವನ್ನು ಬೆಂಬಲಿಸಲಿದ್ದೇವೆ’ ಎಂದಿದೆ.

ಮಾತುಕತೆ ಮುಂದುವರಿಕೆ: ಈ ನಡುವೆ, ಉಕ್ರೇನ್‌ ಮತ್ತು ರಷ್ಯಾ ನಡುವೆ ಮತ್ತಷ್ಟು ಸಂಧಾನ ಮಾತುಕತೆಗೆ ವೇದಿಕೆ ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ಟರ್ಕಿ ಗುರುವಾರ ಹೇಳಿದೆ. ಇತ್ತೀಚೆಗಿನ ಮಾತುಕತೆಯಿಂದ  ಉತ್ತಮ ಬೆಳವಣಿಗೆಗಳು ಆಗಿವೆ. ಯುದ್ಧದ ತೀವ್ರತೆ ತಗ್ಗಿದೆ ಎಂದೂ ಟರ್ಕಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next