Advertisement

ಭಾರತೀಯರಿಗೆ ಬೈಡೆನ್‌ ಸಿಹಿ

01:08 AM Jan 28, 2021 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧಿಕಾರ ವಹಿಸಿಕೊಂಡು ವಾರ ತುಂಬುತ್ತಲೇ ನೂತನ ಅಧ್ಯಕ್ಷ ಜೋ ಬೈಡೆನ್‌ ಅವರು ಭಾರತೀಯರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಎಚ್‌1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ನೀಡಲಾಗುತ್ತಿದ್ದ ಎಚ್‌4 ವರ್ಕ್‌ ಪರ್ಮಿಟ್‌(ಅಮೆರಿಕದಲ್ಲಿ ಉದ್ಯೋಗ ನಡೆಸಲು ನೀಡುತ್ತಿದ್ದ ಪರವಾನಿಗೆ) ನಿರ್ಬಂಧಿಸುವ ಟ್ರಂಪ್‌ ಸರಕಾರದ ನಿರ್ಧಾರವನ್ನೇ ಬೈಡೆನ್‌ ರದ್ದು ಮಾಡಿದ್ದಾರೆ.

Advertisement

ಕಳೆದ ನಾಲ್ಕು ವರ್ಷಗಳಿಂದಲೂ ಅಮೆರಿಕದಲ್ಲಿ ಆತಂಕ ಹಾಗೂ ಅಭದ್ರತೆಯಿಂದ ಬದುಕುತ್ತಿದ್ದ ಅನೇಕ ಭಾರತೀಯರು ಇದರಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಎಚ್‌1 ಬಿ ವೀಸಾ ಮೂಲಕ ಅಮೆರಿಕದಲ್ಲಿ ದುಡಿಯುತ್ತಿರುವ ವ್ಯಕ್ತಿಗಳ ಸಂಗಾತಿಗಳಿಗೂ ಒಬಾಮ ಆಡಳಿತ ಉದ್ಯೋಗ ಮಾಡಿಕೊಂಡಿರಲು ಅವಕಾಶ ಕಲ್ಪಿಸಿತ್ತು. ಆದರೆ ಅನಂತರ ಬಂದ ಟ್ರಂಪ್‌ ಆಡಳಿತವು, ಈ ಎಚ್‌4 ಕೆಲಸದ ಪರವಾನಿಗೆಯನ್ನೇ ರದ್ದು ಮಾಡುವುದಾಗಿ ಘೋಷಿಸಿತ್ತು. ಇದರಿಂದ ಅನೇಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರು.

ಈಗ ಬೈಡೆನ್‌ ಸರಕಾರ‌ ಆ ಚಿಂತೆಯನ್ನು ದೂರ ಮಾಡಿದ್ದು, ಟ್ರಂಪ್‌ ಸರಕಾರದ ಪ್ರಸ್ತಾವ‌ವನ್ನೇ “ವಾಪಸ್‌ ಪಡೆಯಲಾಗಿದೆ’ ಎಂದು ಘೋಷಿಸಿದೆ.

ಇದೇ ವೇಳೆ ಭಾರತೀಯ ಮೂಲದ ಜನಪ್ರತಿನಿಧಿಗಳಾದ ಪ್ರಮೀಳಾ ಜಯಪಾಲ್‌ ಮತ್ತು ರಾಜಾ ಕೃಷ್ಣಮೂರ್ತಿ ಅವರನ್ನು ಬಜೆಟ್‌ ಹಾಗೂ ಕೋವಿಡ್ ಗೆ ಸಂಬಂಧಿಸಿದ ಪ್ರಮುಖ ಸಮಿತಿಗೆ ನೇಮಕ ಮಾಡಲಾಗಿದೆ. ಜತೆಗೆ ಒಬಾಮಾಕೇರ್‌ ಮಾರ್ಕೆಟ್‌ ಅನ್ನು ಮತ್ತೆ ಆರಂಭಿಸಲು ಬೈಡೆನ್‌ ಸರಕಾರ‌ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next