Advertisement

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಸ್ಪರ್ಧಿಸಲು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್‌ ಫಿಟ್‌

11:10 AM Feb 17, 2023 | Team Udayavani |

ವಾಷಿಂಗ್ಟನ್‌: 2024ರಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅಮೇರಿಕಾದ ಹಾಲಿ ಅಧ್ಯಕ್ಷ ಜೋ ಬೈಡೆನ್‌ ದೈಹಿಕವಾಗಿ ಫಿಟ್‌ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮೂಲಕ ತಾವು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸುವ ಆಕಾಂಕ್ಷೆ ಜೋ ಬೈಡನ್‌ ಅವರಿಗೆ ಮೂಡಿದಂತಿದೆ. ಅವರಿಗೆ ಈಗಾಗಲೇ 80 ವರ್ಷ ವಯಸ್ಸಾಗಿದೆ.

Advertisement

ಫೆ.16 ರಂದು ಅವರ ವಾರ್ಷಿಕ ಆರೋಗ್ಯ ಪರೀಕ್ಷೆ ನಡೆಸಿದ್ದ ವೈದ್ಯರು ಬೈಡನ್‌ ಅವರು ಕೆಲಸ ಮಾಡಲು ದೈಹಿಕವಾಗಿ ಯೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಬೆನ್ನಲ್ಲೇ ಅವರು 2024ರ ಚುನಾವಣೆಯಲ್ಲಿ ಅಧ್ಯಕ್ಷ ಗಾದಿಗೆ ಮರು ಸ್ಪರ್ಧೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಉಚಿತ ಪದವಿಶಿಕ್ಷಣ, ಬಸ್ ಪಾಸ್, ರೈತನಿಧಿ ವಿಸ್ತರಣೆ; ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನಲ್ಲೇನಿದೆ

ಅಧ್ಯಕ್ಷರಿಗೆ ಕೆಲವೊಂದಷ್ಟು ವಯೋಸಹಜ ಸಮಸ್ಯೆಗಳಿದ್ದು ಗಂಭೀರವಾದ ಸಮಸ್ಯೆಗಳೇನೂ ಬೈಡನ್‌ ಅವರಿಗಿಲ್ಲ ಎಂದು ವೈದ್ಯರು ಹೇಳಿದ್ಧಾರೆ. ಅಲ್ಲದೆ,” ಅಧ್ಯಕ್ಷ ಜೋ ಬೈಡನ್‌ 80 ವರ್ಷ ವಯಸ್ಸಿನಲ್ಲೂ ದೈಹಿಕವಾಗಿ ಆರೋಗ್ಯವಾಗಿದ್ದು, ತಮ್ಮ ಅಧ್ಯಕ್ಷೀಯ ಕಾರ್ಯಗಳನ್ನು ಮತ್ತು ಅದರ ಜೊತೆಯಲ್ಲಿ ಮುಖ್ಯ ಕಾರ್ಯನಿರ್ವಹಣಾ ಹೊಣೆಗಾರಿಕೆಯನ್ನುಸಮರ್ಥವಾಗಿ ನಿರ್ವಹಿಸಲು ,ರಾಜ್ಯದ ಮುಖ್ಯಸ್ಥರಾಗಿ, ಸೇನಾ ಮುಖ್ಯಸ್ಥರೂ ಆಗಿ ಮುಂದುವರಿಯಲು ಸಮರ್ಥರಾಗಿದ್ದಾರೆ” ಎಂದು ವೈಟ್‌ ಹೌಸ್‌ ಬಿಡುಗಡೆ ಮಾಡಿದ ಪತ್ರದಲ್ಲಿ ಬೈಡನ್‌ ಅವರ ವೈದ್ಯ ಡಾ.ಕೆವಿನ್‌ ಓʼಕಾನರ್‌ ಹೇಳಿಕೆ ನೀಡಿದ್ಧಾರೆ.

Advertisement

Udayavani is now on Telegram. Click here to join our channel and stay updated with the latest news.

Next