Advertisement

ರಷ್ಯಾ ಆಕ್ರಮಣ ವಿರೋಧಿಸುವಲ್ಲಿ ಭಾರತದಿಂದ ‘ಅಸ್ಥಿರ’ ನಿಲುವು: ಜೋ ಬೈಡನ್

08:49 AM Mar 22, 2022 | Team Udayavani |

ವಾಷಿಂಗ್ಟನ್: ಉಕ್ರೇನ್‌ ನ ಮೇಲಿನ ರಷ್ಯಾದ ಆಕ್ರಮಣವನ್ನು ವಿರೋಧಿಸುವಲ್ಲಿ ವಾಷಿಂಗ್ಟನ್‌ನ ಮಿತ್ರರಾಷ್ಟ್ರಗಳಲ್ಲಿ ಭಾರತವು ತನ್ನ ಅಸ್ಥಿರ ನಿಲುವಿನಿಂದ ಒಂದು ಅಪವಾದವಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಸೋಮವಾರ ಹೇಳಿದ್ದಾರೆ.

Advertisement

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಯುನೈಟೆಡ್ ಫ್ರಂಟ್‌ಗಾಗಿ ನ್ಯಾಟೋ, ಯುರೋಪಿಯನ್ ಯೂನಿಯನ್ ಮತ್ತು ಪ್ರಮುಖ ಏಷ್ಯಾದ ಪಾಲುದಾರರು ಸೇರಿದಂತೆ ಯುಎಸ್ ನೇತೃತ್ವದ ಮೈತ್ರಿಯನ್ನು ಬೈಡನ್ ಶ್ಲಾಘಿಸಿದರು.

ಇದು ರಷ್ಯಾದ ಕರೆನ್ಸಿ, ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೈಟೆಕ್ ಸರಕುಗಳಿಗೆ ಪ್ರವೇಶವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ನಿರ್ಬಂಧಗಳನ್ನು ಒಳಗೊಂಡಿದೆ.

ಕ್ವಾಡ್ ಗುಂಪಿನ ಸಹ ಸದಸ್ಯರಾದ ಆಸ್ಟ್ರೇಲಿಯಾ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಗಿಂತ ಭಿನ್ನವಾಗಿ ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿದೆ ಮತ್ತು ವಿಶ್ವಸಂಸ್ಥೆಯಲ್ಲಿ ಮಾಸ್ಕೋವನ್ನು ಖಂಡಿಸುವ ನಿರ್ಣಯಕ್ಕೆ ಮತ ಹಾಕಲು ನಿರಾಕರಿಸಿದೆ.

ಇದನ್ನೂ ಓದಿ:ಆಗಸ್ಟ್‌ನಲ್ಲಿ 4ನೇ ಅಲೆ; ಎದುರಿಸಲು ಸನ್ನದ್ಧ: ಭಯ ಬೇಡ, ಎಚ್ಚರಿಕೆ ಇರಲಿ: ಸಚಿವ ಸುಧಾಕರ್‌

Advertisement

“ಕ್ವಾಡ್ ಗುಂಪಿನಲ್ಲಿ ಭಾರತವನನ್ನು ಹೊರತುಪಡಿಸಿದರೆ ಪುಟಿನ್ ಆಕ್ರಮಣವನ್ನು ಎದುರಿಸುವ ವಿಷಯದಲ್ಲಿ ಜಪಾನ್, ಆಸ್ಟ್ರೇಲಿಯಾ ಅತ್ಯಂತ ಪ್ರಬಲವಾಗಿದೆ” ಎಂದು ಬೈಡನ್ ಹೇಳಿದರು.

ಪಶ್ಚಿಮ ದೇಶಗಳು ಮಾಸ್ಕೋವನ್ನು ವಾಣಿಜ್ಯಿಕವಾಗಿ ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವಾಗಲೂ ಭಾರತೀಯ ತೈಲ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ರಿಯಾಯಿತಿಯಲ್ಲಿ ಖರೀದಿಸುವುದನ್ನು ಮುಂದುವರೆಸಿದೆ ಎಂದು ವರದಿಯಾಗಿದೆ.

ಐತಿಹಾಸಿಕವಾಗಿ ಮಾಸ್ಕೋದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಭಾರತವು, ಉಕ್ರೇನ್‌ನಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡಿತ್ತು. ಆದರೆ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯಕ್ಕೆ ಮತ ಹಾಕಲು ನಿರಾಕರಿಸಿದೆ. ಭಾರತ ಇಲ್ಲಿ ತಟಸ್ಥ ನೀತಿ ಅನುಸರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next