ವ್ಯಾಲೆಂಟೈನ್ಸ್ ಡೇ ಗೆ ಇನ್ನು ಕ್ಷಣಗಣನೆ ಇರುವಾಗ ವಿಶ್ವದ ದೊಡ್ಡಣ್ಣ ಎನ್ನಿಸಿಕೊಳ್ಳುವ ಅಮೇರಿಕಾದ ನೂತನ ಅಧ್ಯಕ್ಷ ದಂಪತಿಗಳು ತಮ್ಮ 43 ವರ್ಷಗಳ ವೈವಾಹಿಕ ಜೀವನದ ಸುಮಧರ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ದಂಪತಿಗಳು ವೈವಾಹಿಕ ಜೀವನದ ರಹಸ್ಯವನ್ನು ತೆರೆದಿಟ್ಟಿದ್ದಾರೆ.
ಓದಿ : ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರಕ್ಕೆ ಭಕ್ತರಿಂದ ಹರಿದು ಬಂತು ಕೋಟಿ ಕೋಟಿ ಹಣ..!
ಜನವರಿ 20 ರಂದು ಜೋ ಬೈಡನ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆ ಸಂದರ್ಭದಲ್ಲಿ ತಮ್ಮ ಪ್ರೀತಿಯ ಹೆಂಡತಿ ಹಾಗೂ ಅಮೇರಿಕಾದ ನೂತನ ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಅವರೊಂದಿಗಿದ್ದರು. ಮತ್ತು ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಕೂಡ ಜೊತೆಗಿದ್ದರು. ಅದು ಅವರ ನಡುವೆ ಇರುವ ಪ್ರೀತಿಯ ಶುದ್ಧತೆಯ ಬಗ್ಗೆ ನಮಗೆ ಹೇಳುತ್ತದೆ. ಇದು ಅಮೇರಿಕಾದ ಜನರಿಗೆ ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆಯಾಗಿತ್ತು.
ಅಮೇರಿಕಾದ ಮೊದಲ ದಂಪತಿಗಳು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತಾಡಿದ್ದಾರೆ. ಪೀಪಲ್ ನಿಯತಕಾಲಿಗೆ ನಡೆಸಿದ ಸಂದರ್ಶನದಲ್ಲಿ ಹೃದಯ ಬಿಚ್ಚಿದ್ದಾರೆ ಅಮೇರಿಕಾದ ಅಧ್ಯಕ್ಷ ದಂಪತಿಗಳು.
“ನಾನು ಜಿಲ್ ನ್ನು ಭೇಟಿಯಾದಾಗಲೇ ಅಂದುಕೊಂಡಿದ್ದೆ, ನಾನಿವಳನ್ನು ಮದುವೆಯಾಗುತ್ತೇನೆಂದು. ಸಾಮಾನ್ಯವಾಗಿ ಪ್ರೀತಿ ಮಾಡಿದವರು ಮದುವೆಯಾಗುವುದು ತೀರಾ ಕಡಿಮೆ ಎಂದು ಎಲ್ಲರೂ ಹೇಳುತ್ತಾರೆ. ಆದರೇ, ನಾನು ಅದನ್ನು ಒಪ್ಪುವುದಿಲ್ಲ. When I am really down, she steps in and when she’s down, I am able to step in. ನಾವಿಬ್ಬರು ಒಬ್ಬರಿಗೊಬ್ಬರು ಹೊಂದಿಕೊಂಡಿದ್ದೇವೆ” ಎಂದು ಬೈಡನ್ ತಮ್ಮ ಪ್ರೇಮ್ ಕಹಾನಿಯನ್ನು ತೆರೆದಿಟ್ಟರು.
ಓದಿ : ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್ ಶರ್ಮ
“ನಾವೀಗ ದಂಪತಿಗಳಾಗಿ ಜೊತೆಯಲ್ಲಿದ್ದೇವೆ. ಕೆಲವೊಮ್ಮೆ ನಾವು ಕಷ್ಟದ ಸಂದರ್ಭವನ್ನು ಅನುಭವಿಸಬೇಕಾಗುತ್ತದೆ. ಆಗ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ. ನಮಗೆ ಬೇಕಾದದ್ದನ್ನು ಪಡೆಯಲೇ ಬೇಕು ಎಂದು ನಾವು ಬಯಸುತ್ತೇವೆ. ಅದನ್ನೇ ಸಾಧಿಸಲು ಬಯಸುತ್ತೇವೆ, ಅದರಿಂದಲೇ ಪಾಠ ಕಲಿಯುತ್ತೇವೆ” ಎಂದು ಉದಾಹರಣೆ ನೀಡುತ್ತಾ ಬೈಡನ್ ತಮ್ಮ ಜೀವನದ ನೆನಪುಗಳನ್ನು ಹಂಚಿಕೊಂಡರು.
“ಎಲ್ಲರೂ ಹೇಳುತ್ತಾರೆ ನಿಮಗೆ ಉತ್ತಮ ಪ್ರೇಮ ಸಂಬಂಧ ಇದೆ ಎಂದು. ನಾನು ಕೂಡ ಒಪ್ಪುತ್ತೇನೆ. ಎಲ್ಲರಿಗೂ ಗೊತ್ತು, ಆಕೆ ನನ್ನನ್ನು ಎಷ್ಟು ಇಷ್ಟ ಪಡುತ್ತಾಳೋ ಅದಕ್ಕಿಂತ ಹೆಚ್ಚಾಗಿ ನಾನು ಆಕೆಯನ್ನು ಪ್ರೀತಿಸುತ್ತೇನೆ ಎಂದು” ನಾನು ಅವಳನ್ನು ತುಂಬಾ ಇಷ್ಟ ಪಡುತ್ತೇನೆ. ನಾನು ನಿಜಕ್ಕೂ ತುಂಬಾ ಅದೃಷ್ಟವಂತ” ಎಂದು ಬೈಡನ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ ಬೈಡನ್, “43 ವರ್ಷಗಳ ವೈವಾಹಿಕ ಜೀವನ ಅತ್ಯಂತ ಖುಷಿಕೊಟ್ಟಿದೆ. ಯಾವುದೇ ರೀತಿಯ ವೈಮನಸ್ಸು ಇದುವರೆಗೆ ನಮ್ಮ ನಡುವೆ ಬಂದಿಲ್ಲ. ನಾವು ಸಂತೋಷದಿಂದಿದ್ದೇವೆ. ಒಬ್ಬರನ್ನೊಬ್ಬರು ಅರಿತುಕೊಂಡಿದ್ದೇವೆ. ಸುಖವಾಗಿದ್ದೇವೆ” ಎಂದರು.
“ನಾವು ಎಷ್ಟು ವರ್ಷ ಜೊತೆಗಿದ್ದೇವೆ ಎನ್ನುವುದು ಮುಖ್ಯವಲ್ಲ. ಹೇಗಿದ್ದೇವೆ ಎನ್ನುವುದು ಮುಖ್ಯ. ಜಿಲ್ ನನ್ನ ಮೇಲೆ ಅಂದು ಇಟ್ಟ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ. ಆಕೆಯ ಪ್ರೀತಿ ಇಂದಿಗೂ ನನಗೆ ಅದೇ ಸಂತೋಷವನ್ನು ಕೊಡುತ್ತದೆ. ನಾನು ಆಕೆಯೊಂದಿಗೆ ಕಳೆದ ಪ್ರತಿ ಕ್ಷಣವೂ ನನಗೆ ಹೊಸ ಆನಂದವನ್ನುಣಬಡಿಸಿದೆ. ಆಕೆಯ ಪ್ರೀತಿಗೆ ಇಂದಿಗೂ ನನ್ನ ಹೃದಯ ತುಂಬಿ ಬರುತ್ತದೆ” ಎಂದು ಹೇಳುವುದರ ಮೂಲಕ ಸಂದರ್ಶನದಲ್ಲಿ ತಮ್ಮ ಮಾತಿಗೆ ಬೈಡನ್ ಪೂರ್ಣ ವಿರಾಮವಿಟ್ಟರು.
ಹೌದು, ವ್ಯಾಲೆಂಟೈನ್ಸ್ ಡೇ ಗೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿವೆ. ತಮ್ಮ ಪ್ರೀತಿಯಿಂದ ಆರಂಭಿಸಿ 43 ವರ್ಷಗಳ ವೈವಾಹಿಕ ಜೀವನದಲ್ಲಿ ಜೊತೆಗಿದ್ದು ಪ್ರತಿ ಕ್ಷಣವನ್ನು ಆನಂದಿಸಿದ ಅಮೇರಿಕಾದ ಮೊದಲ ದಂಪತಿಗಳಿಂದ ಪ್ರೇಮಿಗಳು ಹಲವು ಪಾಠ ಕಲಿಯುವುದಕ್ಕಿದೆ ಎನ್ನುವುದಂತೂ ಅಪ್ಪಟ ಸತ್ಯ.
–ಶ್ರೀರಾಜ್ ವಕ್ವಾಡಿ
ಓದಿ : ಶೀಘ್ರದಲ್ಲೆ ‘ಡಾರ್ಕ್ ಮೋಡ್ ಸರ್ಚಿಂಗ್’ ವೈಶಿಷ್ಟ್ಯ ತರಲಿದೆ ಗೂಗಲ್..!