Advertisement

ಐಎಎಫ್ ಗೆ ಎಫ್ -15 ಎಕ್ಸ್ ಮಲ್ಟಿ-ರೋಲ್ ಯುದ್ಧ ವಿಮಾನ ನೀಡಲು ಅನುಮತಿಸಿದ ಬೈಡನ್ ಸರ್ಕಾರ

04:28 PM Feb 02, 2021 | Team Udayavani |

ವಾಷಿಂಗ್ಟನ್ :  ಯುಎಸ್ ಮತ್ತು ಭಾರತ ಎಫ್ -15 ಎಕ್ಸ್ ಫೈಟರ್ ಜೆಟ್‌ಗಳ ಕೊಡುಕೊಳ್ಳುವಿಕೆಯ ಬಗ್ಗೆ ಚರ್ಚೆ ನಡೆಸಿವೆ ಮತ್ತು ಆ ಎರಡು ವಾಯುಪಡೆಗಳು ಈ ಬಗ್ಗೆ ಮಾಹಿತಿ ಹಂಚಿಕೊಂಡಿವೆ ಎಂದು ಬೋಯಿಂಗ್ ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಏರೋಸ್ಪೇಸ್ ಮೇಜರ್ ತನ್ನ ಇತ್ತೀಚಿನ ಮಲ್ಟಿ ರೋಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ನೀಡಲು ಅಮೆರಿಕ ಸರ್ಕಾರದಿಂದ ಅನುಮೋದನೆ ಪಡೆದ ಹಿನ್ನಲೆಯಲ್ಲಿ ಈ ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಎಫ್ -15 ಎಕ್ಸ್ ಯುದ್ಧ ವಿಮಾನವು ಎಫ್ -15 ವಿಮಾನದ ಮತ್ತೊಂದು ಆವೃತ್ತಿ. ಇದು ಇತ್ತೀಚಿನ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಆವೃತ್ತಿಯಾಗಿದೆ.

ಓದಿ : FDA ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪರೀಕ್ಷಾ ಮರು ದಿನಾಂಕ ಪ್ರಕಟಿಸಿದ ಇಲಾಖೆ

ಅಮೇರಿಕಾ ಮತ್ತು ಭಾರತದ ನಡುವೆ ಈ ವಿಮಾನಗಳ ಬಗ್ಗೆ ಮಾಹಿತಿ ವಿನಿಮಯ ಆಗಿದೆ ಎಂದು ಬೋಯಿಂಗ್ ಅಂತಾರಾಷ್ಟ್ರೀಯ ಮಾರಾಟ ಮತ್ತು ಕೈಗಾರಿಕಾ ಸಹಭಾಗಿತ್ವದ ಉಪಾಧ್ಯಕ್ಷೆ ಮಾರಿಯಾ ಎಚ್ ಲೈನ್ ಪಿಟಿಐಗೆ ಗ್ಲೋಬಲ್ ಉಪಾಧ್ಯಕ್ಷ ಜೆಫ್ ಶಾಕಿ ಅವರ ಜಂಟಿ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ಏಪ್ರಿಲ್ 2019 ರಲ್ಲಿ, ಐಎಎಫ್ ಸುಮಾರು 18 ಶತಕೋಟಿ ಡಾಲರ್ ವೆಚ್ಚದಲ್ಲಿ 114 ಜೆಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್‌ ಎಫ್‌ ಐ (request for information) ಅಥವಾ ಆರಂಭಿಕ ಟೆಂಡರ್ ನೀಡಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಮಿಲಿಟರಿ ಸಂಗ್ರಹಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.

ಲಾಕ್‌ ಹೀಡ್‌ನ ಎಫ್ -21, ಡಸಾಲ್ಟ್ ಏವಿಯೇಷನ್‌ ನ ರಾಫೇಲ್, ಯುರೋಫೈಟರ್ ಟೈಫೂನ್, ರಷ್ಯಾದ ವಿಮಾನ ಮಿಗ್ 35 ಮತ್ತು ಸಾಬ್‌ ನ ಗ್ರಿಪೆನ್ ಈ ಒಪ್ಪಂದದ ಪ್ರಮುಖ ಸ್ಪರ್ಧಿಗಳು. ಮುಂದಿನ ವಾರದಿಂದ ಬೆಂಗಳೂರಿನಲ್ಲಿರುವ ಏರೋ ಇಂಡಿಯಾ 2021 ನಲ್ಲಿ ಎಫ್ -15 ಎಕ್ಸ್ ಪ್ರದರ್ಶನ ನೀಡಲಿದೆ ಎಂದು ಬೋಯಿಂಗ್ ತಿಳಿಸಿದೆ.

ಓದಿ : ವಿಧಾನಪರಿಷತ್ತಿನಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

 

 

Advertisement

Udayavani is now on Telegram. Click here to join our channel and stay updated with the latest news.

Next