Advertisement

90 ದಿನಗಳಲ್ಲಿ ಸೋಂಕಿನ ಮೂಲ ತಿಳಿಯಿರಿ: ಬೈಡೆನ್‌

12:00 AM May 28, 2021 | Team Udayavani |

ವಾಷಿಂಗ್ಟನ್‌: ಜಗತ್ತಿಗೆ ಕೊರೊನಾ ಸೋಂಕು ಹೇಗೆ ತಟ್ಟಿತು ಎಂಬ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ಪ್ರಯತ್ನ ದುಪ್ಪಟ್ಟುಗೊಳಿಸಿ 90 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು. ಹೀಗೆಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ದೇಶದ ಗುಪ್ತಚರ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆ.

Advertisement

ಚೀನದ ವುಹಾನ್‌ ಲ್ಯಾಬ್‌ನಿಂದಲೇ ವೈರಾಣು ಸೋರಿಕೆಯಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಯಲೇಬೇಕು ಎಂಬ ವಿಶ್ವದ ರಾಷ್ಟ್ರಗಳ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವಂತೆಯೇ ಈ ಬೈಡೆನ್‌ ಈ ಸೂಚನೆ ನೀಡಿದ್ದಾರೆ. ಯಾವ ಆಧಾರ ಮತ್ತು ಕ್ಷೇತ್ರಗಳಲ್ಲಿ ತನಿಖೆ ಮುಂದುವರಿಸಬೇಕು ಎಂಬುದನ್ನು ನಿರ್ಧರಿಸುವಂತೆಯೂ ಅವರು ಗುಪ್ತಚರ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಇದರ ಜತೆಗೆ 2019ರ ನವೆಂಬರ್‌ನಲ್ಲಿ ವುಹಾನ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಯಲ್ಲಿನ ಕೆಲವು ಸಂಶೋಧಕರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಬಗ್ಗೆ ಹಲವು ಸಂಶೋಧನಾತ್ಮಕ ವರದಿಗಳೂ ಪ್ರಕಟವಾಗಿರುವ ಬೆನ್ನಲ್ಲಿಯೇ ಈ ನಿರ್ದೇಶನ ಪ್ರಕಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next