Advertisement

ಚೀನದಿಂದ ಆಪತ್ತು ಖಚಿತ

01:14 AM Feb 13, 2021 | Team Udayavani |

ವಾಷಿಂಗ್ಟನ್‌: “ನಾವು ಮುಂದುವರಿಯದೇ ಇದ್ದರೆ ನಮ್ಮ ಪಾಲಿನ ಅವಕಾಶವನ್ನು  ಚೀನ ಕಬಳಿಸಲಿದೆ’- ಹೀಗೆಂದು ಅಮೆರಿಕದ ಸಂಸದರಿಗೆ  ಅಧ್ಯಕ್ಷ ಜೋ ಬೈಡೆನ್‌ ಎಚ್ಚರಿಕೆ ನೀಡಿದ್ದಾರೆ. ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಗೆ ಬರೋಬ್ಬರಿ ಎರಡು ಗಂಟೆಗಳ ಕಾಲ ಅಧ್ಯಕ್ಷ ಬೈಡೆನ್‌ ಮಾತನಾಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾ ಟಗಾರರ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಜೋ ಬೈಡೆನ್‌ ಕಟುವಾಗಿ ಆಕ್ಷೇಪ ಮಾಡಿದ್ದಾರೆ.  ಅದಕ್ಕೆ ಉತ್ತರಿಸಿದ ಕ್ಸಿ ಜಿನ್‌ಪಿಂಗ್‌ “ಎರಡು ರಾಷ್ಟ್ರಗಳ ಜಗಳ ಜಗತ್ತಿಗೆ ಮಾರಕವಾದೀತು’ ಎಂದು ಸೂಚ್ಯವಾಗಿ ಹೇಳಿದ್ದಾರೆ.ಹೀಗಾಗಿ, ಡೊನಾಲ್ಡ್‌ ಟ್ರಂಪ್‌ ಅವಧಿಯಿಂದ ಶುರುವಾದ ಅಮೆರಿಕ- ಚೀನ ಜಗಳ ಹಾಲಿ ವರ್ಷವೂ ಮುಂದುವರಿ ಯುವುದು ಖಚಿತವಾಗಿದೆ

ಎರಡು ಗಂಟೆಯ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಹೊಂದಿರುವ ಹಲವು ಭಿನ್ನಾಭಿಪ್ರಾಯ ಗಳಿಗೆ ಪರಿಹಾರ ಕಂಡುಕೊಳ್ಳುವ ವಿಚಾರಗಳು ಪ್ರಸ್ತಾವವೇ ಆಗಲಿಲ್ಲ. ಗುರುವಾರ ಸಂಸದರ ಜತೆಗೆ ಮಾತನಾಡಿದ ಅಧ್ಯಕ್ಷ ಬೈಡೆನ್‌ ಚೀನ ಮುಂದಿಟ್ಟಿರುವ ಸವಾಲು ಎದುರಿಸಲು ಸಾರಿಗೆ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ನಾವೂ, ಸ್ಪರ್ಧೆಯಿಂದ ಮುಂದಡಿ ಇಡದೇ ಇದ್ದರೆ, ದೇಶಕ್ಕಿರುವ ಅವಕಾಶಗಳು ಚೀನ ಕಬಳಿಸುವುದು ಖಚಿತ ಎಂದರು.

ಸುಧಾರಿಸಲಿದೆ: ಅಮೆರಿಕದ ವಲಸೆ ವ್ಯವಸ್ಥೆಯಲ್ಲಿದ್ದ ನ್ಯೂನತೆ ತೆಗೆದು ಹಾಕಲು ಹೊಸ ಸರಕಾರ ಬದ್ಧವಾ ಗಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಬೈಡೆನ್‌ ಸಹಿ ಮಾಡಿದ ಆದೇಶಗಳು ಕೇವಲ ವ್ಯವಸ್ಥೆಯ ಸುಧಾರಣೆಯ ಒಂದು ಕ್ರಮ ಮಾತ್ರ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next