Advertisement

ಜೋಡುಪಾಲ: ಮನೆ ಮೇಲೆ ಕುಸಿದ ಗುಡ್ಡ ; ಹಾನಿ

01:18 AM Jul 22, 2019 | Sriram |

ಸುಳ್ಯ/ ಅರಂತೋಡು: ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಅಪಾರ ನಷ್ಟ, ಪ್ರಾಣ ಹಾನಿ ಉಂಟಾಗಿದ್ದ ಜೋಡುಪಾಲದಲ್ಲಿ ರವಿವಾರ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಮೇಲೆ ಗುಡ್ಡ ಕುಸಿದ ಘಟನೆ ಸಂಭವಿಸಿದೆ.

Advertisement

ಗುಡ್ಡ ಕುಸಿತದ ಪರಿಣಾಮವಾಗಿ ವೀರೇಂದ್ರ ಅವರ ಮನೆ ಜಖಂಗೊಂಡಿದೆ. ಸಾವುನೋವು ಉಂಟಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮಳೆ ತೀವ್ರ ಪ್ರಮಾಣದಲ್ಲಿ ಸುರಿಯಲು ಆರಂಭಿಸುವ ಮೊದಲೇ ಗುಡ್ಡ ಕುಸಿದಿರುವುದು ಸ್ಥಳೀಯ ಪರಿಸರದಲ್ಲಿ ಆತಂಕ ಸೃಷ್ಟಿಸಿದೆ.ಕಳೆದ ಬಾರಿ ಭೂವಿಜ್ಞಾನಿಗಳು ಎಚ್ಚರಿಸಿದ್ದರು!

ಕಳೆದ ಬಾರಿ ಭೂ ಕುಸಿತವಾದಾಗ ಜೋಡುಪಾಲ, ಮೊಣ್ಣಂಗೇರಿ, ಅರೆಕ್ಕಲ್‌ ಮೊದಲಾದ ಪ್ರದೇಶಗಳಿಗೆ ಭಾರತೀಯ ಭೂ ಸರ್ವೇಕ್ಷಣೆ, ಭೂ ಗರ್ಭ ಶಾಸ್ತ್ರದ ವಿಜ್ಞಾನಿಗಳು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಕೇಂದ್ರದ ನಿರ್ದೇಶಕರು ಭೇಟಿ ನೀಡಿ ಮತ್ತೆ ಮತ್ತೆ ಭೂ ಕುಸಿತವಾಗುವ ಸಾಧ್ಯತೆಯ ಎಚ್ಚರಿಕೆ ನೀಡಿದ್ದರು.

ಸಂಪಾಜೆ-ಕಡಮಕಲ್‌ ಮಳೆ
ಕಳೆದ 24 ತಾಸುಗಳಲ್ಲಿ (ಶನಿವಾರ ದಿನಾಂತ್ಯ) ದಕ್ಷಿಣ ಕನ್ನಡ ಗಡಿ ಭಾಗದ ಸಂಪಾಜೆ ಮತ್ತು ಕಡಮಕಲ್‌ ಶ್ರೇಣಿಯ ತಪ್ಪಲಿನ ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆಯಾಗಿದೆ.

ತ್ರಿವೇಣಿ ಸಂಗಮ: ನೀರಿನ ಮಟ್ಟ ಏರಿಕೆ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

Advertisement

ಕೊಡಗು, ಕೇರಳ ಗಡಿಭಾಗದಲ್ಲಿ ನಿರಂತರ ಮಳೆ ಯಾಗುತ್ತಿರುವುದರಿಂದ ಭಾಗಮಂಡಲದ ನದಿಪಾತ್ರ ದಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಜಿಲ್ಲೆಯ ಇತರ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕೆಲವು ಭಾಗಗಳಲ್ಲಿ ಬರೆ ಕುಸಿದ ಘಟನೆಗಳು ನಡೆದಿವೆ. ವಿರಾಜಪೇಟೆ ತಾಲೂಕಿನ ಮಲೆತಿರಿಕೆ ಬೆಟ್ಟದಲ್ಲಿರುವ ಎರಡು ಮನೆಗಳ ತಡೆಗೋಡೆಗಳ ಮೇಲೆ ಬರೆ ಕುಸಿದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯತ್‌ ಸದಸ್ಯ ಡಿ.ಪಿ. ರಾಜೇಶ್‌ ಪದ್ಮನಾಭ ಮತ್ತು ಸಿಬಂದಿ ಭೇಟಿ ಪರಿಶೀಲಿಸಿದ್ದು, ಅಂದಾಜು 3 ಲಕ್ಷ ರೂ.ನಷ್ಟವಾಗಿದೆ ಎಂದು ಮನೆ ಮಾಲಕರು ತಿಳಿಸಿದ್ದಾರೆ.

ಮಡಿಕೇರಿ: ಬಸ್‌ ನಿಲ್ದಾಣ ಬಳಿ ಬರೆ ಕುಸಿತ
ಕಳೆದ ಮಳೆಗಾಲದಲ್ಲಿ ಹಾನಿಗೀಡಾಗಿದ್ದ ಮಡಿಕೇರಿ ನಗರದ ಹಳೆಯ ಖಾಸಗಿ ಬಸ್‌ ನಿಲ್ದಾಣದ ಬೃಹತ್‌ ಬರೆ ಕುಸಿಯುತ್ತಲೇ ಇದ್ದು, ರವಿವಾರೂ ಮಣ್ಣು ಕುಸಿದಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯಲ್ಲಿರುವ ಜಿಲ್ಲಾಡ‌ಳಿತ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next