ಶಿವಮೊಗ್ಗ: ಜಿಲ್ಲೆ ಸಾಗರ ತಾಲ್ಲೂಕಿನ ಹಳೆ ಇಕ್ಕೇರಿ ಸಮೀಪದ ಕಸಕಸೆಕೊಡ್ಲು ಗ್ರಾಮದಲ್ಲಿ ತಾಯಿ ಮತ್ತು ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ರವಿವಾರ ನಡೆದಿದೆ.
ಕೊಲೆಯಾದವರನ್ನು ಬಂಗಾರಮ್ಮ(62), ಪ್ರವೀಣ್ (32) ಎಂದು ಗುರುತಿಸಲಾಗಿದೆ.
ರವಿವಾರ ಬೆಳಗಿನ ಜಾವ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿ ಮೊಬೈಲ್ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ.
ಪ್ರವೀಣನ ಪತ್ನಿ ರೋಹಿಣಿ ಮತ್ತು10 ತಿಂಗಳ ಮಗುವಿನ ಎದುರಲ್ಲೇ ಕೊಲೆ ನಡೆದಿದೆ. ರೋಹಿಣಿ ಕೂಗಿಕೊಳ್ಳದಂತೆ ಆಕೆಯ ಬಾಯಿಗೆ ಪ್ಲಾಸ್ಟರ್ ಅಂಟಿಸಿದ ದುಷ್ಕರ್ಮಿಗಳು ಆಕೆಯ ಗಂಡ ಮತ್ತು ಅತ್ತೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.