Advertisement

Jodhpur: ಕ್ವಾರ್ಟರ್ಸ್ ನಲ್ಲಿ ಯೋಧನ ಪತ್ನಿ, ಪುತ್ರಿ ನಿಗೂಢ ರೀತಿಯಲ್ಲಿ ಮೃತ್ಯು

10:27 PM Jul 30, 2023 | Team Udayavani |

ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದ ಅಧಿಕೃತ ಕ್ವಾರ್ಟರ್ಸ್ ನಲ್ಲಿ ಭಾನುವಾರ ಬೆಳಗ್ಗೆ ಸೇನಾ ಸಿಬಂದಿಯ ಪತ್ನಿ ಮತ್ತು ಮಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

25 ವರ್ಷದ ರುಕ್ಮೀನಾ ಮತ್ತು ಆಕೆಯ ಎರಡು ವರ್ಷದ ಮಗಳು ರಿದ್ಧಿಮಾ ಅವರ ಸುಟ್ಟ ದೇಹಗಳು ಹಾಸಿಗೆಯ ಮೇಲೆ ಪತ್ತೆಯಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಲ್ಲಿ ದಂಪತಿಗಳು ಸಾವನ್ನಪ್ಪಿದ್ದಾರೆ ಎಂದು ರುಕ್ಮೀನಾ ಪತಿ ರಾಮ್ ಪ್ರಸಾದ್ ಹೇಳಿಕೆ ನೀಡಿದ್ದಾರೆ. ರಾಮ್ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಮತ್ತು ಅವರು ಜೋಧ್‌ಪುರ ತಲುಪಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಉಪ ಕಮಿಷನರ್ ಅಮೃತ ದುವಾಹ್ನ್ ಹೇಳಿದ್ದಾರೆ.

ಸಿಕ್ಕಿಂ ಮೂಲದ ರಾಮ್ ಪ್ರಸಾದ್ ನೇಪಾಳ ಮೂಲದ ರುಕ್ಮೀನಾ ಅವರನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಭಾರತೀಯ ಸೇನೆಯಲ್ಲಿ ನಾಯಕ್ ಆಗಿರುವ ರಾಮ್ ಪ್ರಸಾದ್ ಎರಡು ವರ್ಷಗಳ ಹಿಂದೆ ಕುಟುಂಬ ಸಮೇತ ಜೋಧ್‌ಪುರಕ್ಕೆ ತೆರಳಿ ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next