Advertisement

ವೆಬ್‌ ಡಿಸೈನ್‌ ಕಲಿಕೆಯ ಜತೆಗೆ ಉದ್ಯೋಗ

10:11 AM Dec 12, 2019 | mahesh |

ಇಂದಿನ ಸ್ಪರ್ಧಾತ್ಮಕ ಮತ್ತು ವಾಣಿಜ್ಯ ಕೇಂದ್ರೀಕೃತ ಯುಗದಲ್ಲಿ ವಿಭಿನ್ನವಾದ ಕೌಶಲ ನಿಮ್ಮಲ್ಲಿದ್ದರೆ ಉದ್ಯೋಗ ಪಡೆಯಲು ಯಾವುದೇ ತೊಡಕಿಲ್ಲ. ಅಂತಹ ವಿಭಿನ್ನ ಕೌಶಲಗಳಲ್ಲಿ ವೆಬ್‌ ಡಿಸೈನಿಂಗ್‌ ಕೂಡ ಒಂದಾಗಿದೆ. ಈ ಕೆಲಸಕ್ಕೆ ಇಂದು ಸಾಕಷ್ಟು ಬೇಡಿಕೆ ಇದೆ. ಈ ಉದ್ಯೋಗವು ಇಂದು ಹೆಚ್ಚು ಬೇಡಿಕೆಯಿದ್ದು ಬಹುತೇಕರು ವೆಬ್‌ ಡಿಸೈನಿಂಗ್‌ ಕಡೇ ಗಮನಹರಿಸುತ್ತಿದ್ದಾರೆ.

Advertisement

ನಿಮ್ಮಲ್ಲಿ ಸ್ವಂತ ವಿಚಾರ ಇದ್ದರೆ ಮನೆಯಲ್ಲೇ ಕುಳಿತು ದಿನಕ್ಕೆ ಸಾವಿರಾರು ರೂಪಾಯಿ ಹಣ ಗಳಿಸಬಹುದಾಗಿದೆ. ವೆಬ್‌ ಬಗೆಗಿನ ಜ್ಞಾನ ನಿಮ್ಮಲ್ಲಿದ್ದರೆ ನಿಮ್ಮ ಓದಿನೊಂದಿಗೆ ನಿಮಗೆ ಬೇಕಾದಷ್ಟು ಹಣ ಸಂಪಾದಿಸಲು ಸರಳ ಮತ್ತು ಸುಸೂತ್ರವಾದ ಮಾರ್ಗ ಇದಾಗಿದೆ. ಅಲ್ಲದೇ ಅದರಲ್ಲೇ ನಿಮಗೇ ಆಸಕ್ತಿ ಬೆಳೆದರೆ ಓದು ಮುಗಿದ ನಂತರ ಪೂರ್ಣ ಪ್ರಮಾಣದ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು.

ಬೇಡಿಕೆ ಹೆಚ್ಚಲು ಕಾರಣ?
ಯಾವುದೇ ಎಂಎನ್‌ಸಿ ಕಂಪೆನಿ, ಶಿಕ್ಷಣ ಸಂಸ್ಥೆ, ಆಸ್ಪತ್ರೆ, ವಿವಿಗಳು ಅಥವಾ ಇನ್ನಾವುದೇ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುವ ಗ್ರಾಹಕರನ್ನು ಆಕರ್ಷಿಸುವುದು ಮುಖ್ಯ ಉದ್ಧೇಶವಾಗಿರುತ್ತದೆ. ನೀವು ತಯಾರಿಸಿದ ವೆಬ್‌ ಡಿಸೈನ್‌ ಗ್ರಾಹಕರನ್ನು ಆಕರ್ಷಿಸುವಂತೆ ಮತ್ತು ಸರಳವಾಗಿದ್ದರೆ ಅದರಿಂದ ನಿಮಗೆ ಎಷ್ಟು ಬೇಕಾದರೂ ಹಣ ನೀಡಲು ಕಂಪೆನಿಗಳು ತಯಾರಿರುತ್ತವೆ. ಒಂದು ಬಾರಿ ನೀವು ಕ್ಲೈಂಟ್ಸ್‌ಗಳಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿದರೆ ನಿಮ್ಮ ಕೈ ತುಂಬ ಕೆಲಸಗಳು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾಳ್ಮೆ ಇರಲಿ
ವೆಬ್‌ ಡಿಸೈನ್‌ ಪ್ರಾರಂಭಿಸಿದ ತಕ್ಷಣ ನಿಮಗೆ ಚಿಕ್ಕ ಚಿಕ್ಕ ಕೆಲಸಗಳು ಸಿಗಬಹುದು ಅಥವಾ ಸಿಗದೇ ಇರಬಹುದು. ಆದರೆ ನಿಮ್ಮ ಕೆಲಸದ ಬಗ್ಗೆ ಕ್ರಮೇಣ ಗೊತ್ತಾದಂತೆ ಹೆಚ್ಚು ಕೆಲಸಗಳು ಸಿಗುತ್ತವೆ. ಪ್ರಾರಂಭಿಸಿದ ತಕ್ಷಣವೇ ಕೈತುಂಬ ಕೆಲಸ ಸಿಗಬೇಕೆಂದು ನಿರಿಕ್ಷಿಸುವುದು ಸರಿಯಲ್ಲ.

ಬೇಕಾಗುವ ಅರ್ಹತೆಗಳು
1 ವಿಭಿನ್ನ ಆಲೋಚನೆ ನಿಮ್ಮಲ್ಲಿದ್ದರೆ ಕೆಲಸ ತಾನಗೆ ನಿಮ್ಮನ್ನು ಹುಡುಕಿ ಬರುತ್ತದೆ.
2 ಇಂಗ್ಲಿಷ್‌ ಕುರಿತಾದ ಅಗತ್ಯ ಜ್ಞಾನ ಹೊಂದಿರಬೇಕು. ಏಕೆಂದರೆ ಇಂಗ್ಲಿಷ್‌ ಗೊತ್ತಿರದಿದ್ದರೆ ವೆಬ್‌ ಡಿಸೈನಿಂಗ್‌ ಕಠಿನ.
3 ನುರಿತ ವೆಬ್‌ ಡಿಸೈನಿಂಗ್‌.
4 ಕಠಿನ ಪರಿಶ್ರಮ ನಿಮ್ಮಲ್ಲಿರಲಿ. ಏಕೆಂದರೆ ಸಮಯಕ್ಕೆ ಸರಿಯಾಗಿ ಡಿಸೈನ್‌ ಒದಗಿಸುವುದು ಅಗತ್ಯ.
5 ಸ್ವಂತ್‌ ಲ್ಯಾಪ್‌ಟಾಪ್‌ ಇಟ್ಟುಕೊಳ್ಳಿ.
6 ಕ್ಲೈಂಟ್ಸ್‌ಗಳೊಂದಿಗೆ ಉತ್ತಮ ಬಾಂಧವ್ಯ ಬೆಳಿಸಿಕೊಳ್ಳಿ.
7 ಆಯಾ ಸಂಸ್ಥೆಗಳಿಗೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ವೆಬ್‌ ಡಿಸೈನಿಂಗ್‌ ರೂಢಿಸಿಕೊಳ್ಳಿ.
8 ಗ್ರಾಹಕರು ಹುಡುಕುವ ಮಾಹಿತಿ ಬೇಗನೆ ಸಿಗುವಂತೆ ಡಿಸೈನ್‌ ಮಾಡಿ.
9 ಡಿಸೈನಿಂಗ್‌ ಸ್ಟೈಲಿಶ್‌ ಆಗಿರಲಿ.

Advertisement

- ಶಿವಾನಂದ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next