ತುಮಕೂರು: ಜಿಲ್ಲಾದ್ಯಂತ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ (ಉದ್ಯೋಗ ಚೀಟಿ) ಪಡೆಯದೇ ಇರುವ ಅರ್ಹ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸುವ ಕಾರ್ಯ ನ.1ರಿಂದ ಆರಂಭ ಗೊಂಡಿದೆ. ನ.15ರ ವರೆಗೆ ಜಿಲ್ಲಾದ್ಯಂತ ಎಲ್ಲಾ ತಾಪಂ, ಗ್ರಾಪಂಗಳಲ್ಲಿ ವಿಶೇಷ ಜಾಬ್‌ಕಾರ್ಡ್, ಸಾಮಾನ್ಯ ಜಾಬ್‌ಕಾರ್ಡ್ ವಿತರಣೆ ಅಭಿಯಾನ ನಡೆಯಲಿದೆ.
ಕಲ್ಪತರು ನಾಡಿನ ಗ್ರಾಮೀಣ ಪ್ರದೇಶದಲ್ಲಿ ಅಂದಾಜು 6ಲಕ್ಷ ಕುಟುಂಬಗಳಿದ್ದು ನರೇಗಾ ಯೋಜನೆಯಡಿ ಇದುವರೆಗೆ ಒಟ್ಟು 3,61,574 ಕುಟುಂಬಕ್ಕೆ ಮಾತ್ರ ಜಾಬ್‌ಕಾರ್ಡ್ ವಿತರಿ ಸಲಾಗಿದೆ. ಈಗ ಅರ್ಹ ಎಲ್ಲಾ ಕುಟುಂಬಗಳಿಗೆ ಹೊಸದಾಗಿ ಬೇಡಿಕೆ ಅನುಸಾರ ಉದ್ಯೋಗ ಚೀಟಿ ನೀಡಲಾಗು ತ್ತದೆ. ಕೆಲವು ಗ್ರಾಪಂಗಳಿಗೆ ಸ್ವತಹ ಜಿಪಂ ಸಿಇಒ ಶುಭ ಕಲ್ಯಾಣ್ ಭೇಟಿ ನೀಡಿ ಜಾಬ್ ಕಾರ್ಡ್ ನೀಡುತ್ತಿದ್ದಾರೆ.
ಎಲ್ಲಾ ಗ್ರಾಪಂ ಮಟ್ಟದಲ್ಲಿ ಗ್ರಾಮವಾರು ದಿನಾಂಕ ಗಳ ವೇಳಾಪಟ್ಟಿ ಸಿದ್ಧಪಡಿಸಿ ಜಾಬ್‌ಕಾರ್ಡ್ ವಿತರಣಾ ಕ್ಯಾಂಪ್ ಕೈಗೊಳ್ಳಲಾಗುತ್ತಿದೆ. ಮನೆ ಮನೆ ಭೇಟಿ ನೀಡಿ ಕುಟುಂಬಕ್ಕೆ ಜಾಬ್‌ಕಾರ್ಡ್ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ. ಕೆಲಸಕ್ಕಾಗಿ ದೂರದ ಊರಿಗೆ ವಲಸೆ ಹೋಗದೆ ಸ್ವಂತ ಊರಿನಲ್ಲಿಯೇ ಅರ್ಹ ಕುಟುಂಬಕ್ಕೆ ಉದ್ಯೋಗ ನೀಡಿ ಸ್ವಾವಲಂಬಿ ಬದುಕಿಗೆ ದಾರಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ದುಡಿಯುವ ಕೈಗೆ ಕೆಲಸ: ಜಮೀನು ಹೊಂದಿರುವ ರೈತರು ತಮ್ಮ ಹೊಲದಲ್ಲಿ ತಾವೇ ಮಾಡುವ ಕೆಲಸಕ್ಕೂ ಕೂಲಿ ಪಾವತಿ ಮಾಡಲಾಗುವುದು. ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಕೈಗೊಳ್ಳಬಹುದಾಗಿದೆ. ವೈಯಕ್ತಿಕ ಕಾಮ ಗಾರಿಗಳಡಿ ಅರ್ಹ ಫಲಾನುಭವಿ ರೈತನಿಗೆ ತನ್ನ ಜಮೀನಿನಲ್ಲಿ ನಿಗದಿತ ಬೆಳೆ ಬೆಳೆಯಲು, ಪುನಶ್ಚೇತನ, ನರ್ಸರಿ ಅಭಿವೃದ್ಧಿ, ತೋಟ ಸ್ಥಾಪನೆ, ನಿರ್ವಹಣೆ, ಕೃಷಿ ಹೊಂಡ, ಎರೆಹುಳು ತೊಟ್ಟಿ ನಿರ್ಮಾಣ ಕೈಗೊಳ್ಳಬಹು ದಾಗಿದೆ. ಅದೇ ರೀತಿ ಸಮುದಾಯ ಕಾಮಗಾರಿ ಗಳಡಿ ರಸ್ತೆ ಬದಿ, ಕೆರೆ ಅಂಗಳ ಗೋಮಾಳ ಪ್ರದೇಶ, ಶಾಲಾ, ಕಾಲೇಜು, ಸಮುದಾಯ ಜಮೀನುಗಳಲ್ಲಿ ನೆಡು ತೋಪು, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿ ಕೈಗೊಳ್ಳಬಹುದಾಗಿದೆ.
ಅಲ್ಲದೆ ವಿವಿಧ ವಸತಿ ಯೋಜನೆ ಕಾಮಗಾರಿ ಹಾಗೂ ರೈತರ ಜಮೀನಿನಲ್ಲಿ ವೈಯಕ್ತಿಕವಾಗಿ ಮಾಡಬಹುದಾದ ಕೊಟ್ಟಿಗೆ ನಿರ್ಮಾಣ, ಕೊಳವೆಬಾವಿ ಮರುಪೂರಣ ಗುಂಡಿ ಗಳು, ಭೂ ಅಭಿವೃದ್ಧಿ ಯಂತಹ ಕಾಮಗಾರಿ ಕೈಗೊಳ್ಳ ಬಹುದಾಗಿದೆ. ಕೂಲಿ ಕೆಲಸ ಮಾಡಿದವರಿಗೆ ತ್ವರಿತ ಕೂಲಿ ಹಣದ ಪಾವತಿ ಮಾಡಲು ಪ್ರತಿಯೊಬ್ಬ ಕೂಲಿಕಾರ ಕಡ್ಡಾಯವಾಗಿ ಬ್ಯಾಂಕ್ ಖಾತೆಹೊಂದಿದ್ದು, ಆಧಾರ್ ಕಾರ್ಡ್ ಜೋಡಣೆ ಮಾಡಿರಬೇಕು.
ಉದ್ಯೋಗ ಚೀಟಿ ಕಡ್ಡಾಯ: ಯೋಜನೆ ಫಲಾನು ಭವಿಗಳಾಗಲು ತಪ್ಪದೇ ನರೇಗಾ ಯೋಜನೆಗೆ ನೋಂದಾಯಿಸಿಕೊಂಡು ಉದ್ಯೋಗ ಚೀಟಿ ಪಡೆ ಯುವುದು ಕಡ್ಡಾಯ. ಉದ್ಯೋಗ ಚೀಟಿ ಪಡೆಯಲು ನಮೂನೆ-1ರಲ್ಲಿ ಹಾಗೂ ಉದ್ಯೋಗ ಪಡೆಯಲು ನಮೂನೆ-6ರಲ್ಲಿ ಸಂಬಂಧಿಸಿದ ಗ್ರಾಪಂಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನ ಬರಪೀಡಿತ ಪ್ರದೇಶದಲ್ಲಿ 150 ದಿನ ಉದ್ಯೋಗ ಒದಗಿಸ ಲಾಗುವುದು. ಯೋಜನೆಯಡಿ ಉದ್ಯೋಗಕ್ಕಾಗಿ ಬರುವ ಮಹಿಳೆ ಮತ್ತು ಪುರುಷರಿಗೆ ಉದ್ಯೋಗ ನೀಡಿ ದಿನವೊಂದಕ್ಕೆ 249 ರೂ. ಸಮಾನ ಕೂಲಿ ಪಾವತಿಸಲಾಗುವುದು. ಕೆಲಸಕ್ಕಾಗಿ ಆರೆ, ಗುದ್ದಲಿ, ಪಿಕಾಸಿ, ಮಂಕರಿ ತಂದಲ್ಲಿ ಪ್ರತಿ ದಿನಕ್ಕೆ ಹೆಚ್ಚುವರಿ 10 ರೂ. ಪಾವತಿ ಮಾಡಲಾಗುವುದು. ಕೂಲಿ ಹಣವನ್ನು 15 ದಿನಗಳ ಒಳಗೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು