Advertisement

ಕೆಲಸ ನಿರಾಕರಣೆ ವಿರೋಧಿಸಿ ಧರಣಿ

04:15 PM May 22, 2019 | Team Udayavani |

ಮಂಡ್ಯ: ಕಾನೂನು ಬಾಹಿರವಾಗಿ ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವುದನ್ನು ವಿರೋಧಿಸಿ ಮತ್ತು ಹೈಕೋರ್ಟ್‌ ತೀರ್ಪಿನನ್ವಯ ಕನಿಷ್ಠ ವೇತನ ಜಾರಿಗೆ ಅಗ್ರಹಿಸಿ ಮೆ.ಮೆಗ್ನೀಷಿಯಂ ಅಂಡ್‌ ಅಲೈಡ್‌ ಪ್ರಾಡಕ್ಟ್ ಕಾರ್ಮಿಕರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.

Advertisement

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾವಣೆಗೊಂಡ ಮೆ.ಮೆಗ್ನೀಷಿಯಂ ಅಂಡ್‌ ಅಲೈಡ್‌ ಪ್ರಾಡಕ್ಟ್ ಕಾರ್ಮಿಕರ ಸಂಘದ ಪದಾಧಿ ಕಾರಿಗಳು, ಜಿಲ್ಲಾ ಕಾರ್ಮಿಕ ಇಲಾಖೆಯವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ಕುಳಿತು, ಮದ್ದೂರು ತಾಲೂಕು ಹುರುಗಲವಾಡಿ ಕೈಗಾರಿಕಾ ಪ್ರದೇಶ ದಲ್ಲಿರುವ ಕಾರ್ಖಾನೆಯ ಆಡಳಿತ ಮಂಡಳಿಯು ಸುಮಾರು ಎರಡು ತಿಂಗಳಿನಿಂದ ಕಾರ್ಮಿಕರಿಗೆ ಯಾವುದೇ ಸೂಚನೆ ನೀಡದೆ ಕೆಲಸ ನಿರಾಕರಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ವಿರೋಧಿ ನೀತಿ: ಎರಡು ತಿಂಗಳಿನಿಂದ ವೇತನ ನೀಡದೆ ಕಾರ್ಖಾನೆಯ ಬಾಗಿಲು ಮುಚ್ಚಿದೆ. ಆಡಳಿತ ಮಂಡಳಿಯ ಈ ಕ್ರಮ ಕಾರ್ಮಿಕರ ವಿರೋಧಿ ನೀತಿಯಾಗಿದ್ದು, ಕಾರ್ಮಿಕರ ಜೀವನ ನಡೆಸುವುದು ಬಹಳ ದುಸ್ತರವಾಗಿದೆ. ಹಲವಾರು ವರ್ಷಗಳಿಂದ ಕಾನೂನು ಪ್ರಕಾರ ನೀಡಬೇಕಾಗಿರುವ ಬೋನಸ್‌ ನೀಡಿಲ್ಲ. ಮೂಲ ಸೌಕರ್ಯಗಳನ್ನು ನೀಡದೆ ಕಾರ್ಮಿಕರಿಗೆ ಬಹಳ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಆದ್ದರಿಂದ ಕಾರ್ಮಿಕ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅಕ್ರಮ ಬೀಗ ಮುದ್ರೆಯನ್ನು ತೆರವುಗೊಳಿಸಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು. ಹೈಕೋರ್ಟ್‌ ತೀರ್ಪಿನನ್ವಯ ಕನಿಷ್ಠ ವೇತನ ಕೊಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು, ಉಪಾಧ್ಯಕ್ಷ ಮಾಯಣ್ಣಘಿ, ಸಹ ಕಾರ್ಯದರ್ಶಿ ರಾಮು, ಪ್ರಧಾನ ಕಾರ್ಯದರ್ಶಿ ಪಿ.ತಿಮ್ಮೇಶ್‌, ಸಿಐಟಿಯು ಸಿ.ಕುಮಾರಿ, ಜಿ. ರಾಮಕೃಷ್ಣ, ಚಂದ್ರಶೇಖರ್‌, ಚಲುವರಾಜು ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next