Advertisement
ಜಿಲ್ಲಾ ಅಗ್ನಿಶಾಮಕ ಅಧಿ ಕಾರಿಗಳ ಕಚೇರಿಯಲ್ಲಿ ಒಟ್ಟು 181 ಮಂಜೂರಾತಿ ಹುದ್ದೆಗಳಿದ್ದು, ಇದರಲ್ಲಿ 106 ಹುದ್ದೆಗಳುಭರ್ತಿಯಾಗಿವೆ. ಉಳಿದ 75 ಹುದ್ದೆಗಳು ಖಾಲಿ ಇವೆ. ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ 6, ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ 13, ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ 13, ಹಿರೇಕೆರೂರು ಅಗ್ನಿಶಾಮಕ ಠಾಣೆಯಲ್ಲಿ 12, ಶಿಗ್ಗಾವಿ ಅಗ್ನಿಶಾಮಕ ಠಾಣೆಯಲ್ಲಿ 11, ಬ್ಯಾಡಗಿ ಅಗ್ನಿಶಾಮಕ ಠಾಣೆಯಲ್ಲಿ 10, ಸವಣೂರು ಅಗ್ನಿಶಾಮಕ ಠಾಣೆಯಲ್ಲಿ 10 ಹುದ್ದೆಗಳು ಖಾಲಿ ಇವೆ.
ಹಿರೇಕೆರೂರು, ಬ್ಯಾಡಗಿ, ಸವಣೂರು ಅಗ್ನಿಶಾಮಠ ಠಾಣೆಗಳಲ್ಲಿ ಠಾಣಾ ಧಿಕಾರಿಗಳೇ ಇಲ್ಲ. ಹಾನಗಲ್ಲನಲ್ಲಿ ಸಹಾಯಕ ಠಾಣಾ ಧಿಕಾರಿಯೂ ಇಲ್ಲದ ಪರಿಸ್ಥಿತಿ ಇದೆ. ಹಾನಗಲ್ಲ, ಹಿರೇಕೆರೂರು ಹಾಗೂ ಬ್ಯಾಡಗಿ ಠಾಣೆಗಳಲ್ಲಿ ಚಾಲಕ ತಂತ್ರಜ್ಞರು ಒಬ್ಬರೂ
ಇಲ್ಲ. ಹಾನಗಲ್ಲ ಹಾಗೂ ಶಿಗ್ಗಾವಿ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರ ಕೊರತೆಯೂ ಇದೆ. ಈ ತುರ್ತು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಗ್ನಿಶಾಮಕರ ಸಂಖ್ಯೆಯೂ ಅರ್ಧಕ್ಕರ್ಧ ಖಾಲಿ ಇದೆ. ಇದನ್ನೂ ಓದಿ:ಪಾಕ್ ಪರ ಘೋಷಣೆ ವಿಚಾರ:ಬೆಳ್ತಂಗಡಿ ಪೊಲೀಸ್ ಠಾಣೆ ಎದುರು ಜಮಾಯಿಸಿದ ನೂರಾರುSDPI ಕಾರ್ಯಕರ್ತರು
Related Articles
Advertisement
ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅ ಧಿಕಾರಿ ಹುದ್ದೆ ಒಂದು, ಅಗ್ನಿಶಾಮಕ ಠಾಣಾಧಿ ಕಾರಿಗಳು 4, ಸಹಾಯಕ ಠಾಣಾಧಿಕಾರಿಗಳು 5, ಚಾಲಕ ತಂತ್ರಜ್ಞರು 3, ಪ್ರಮುಖ ಅಗ್ನಿಶಾಮಕರು 25, ಅಗ್ನಿಶಾಮಕ ಚಾಲಕರು 22, ಅಗ್ನಿಶಾಮಕರು 46 ಹೀಗೆ ಒಟ್ಟು 106 ಹುದ್ದೆಗಳು ಮಾತ್ರ ಭರ್ತಿಯಾಗಿವೆ.
ಸಿಬ್ಬಂದಿ ಕೊರತೆಯ ನಡುವೆಯೂ ಅಗ್ನಿಶಾಮಕ ದಳ ಇರುವಷ್ಟು ಸಿಬ್ಬಂದಿ ಬಳಸಿಕೊಂಡು ತುರ್ತು ಸೇವೆಯಲ್ಲಿ ನಿರತವಾಗಿದೆ. ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವ ಮೂಲಕಅಗ್ನಿಶಾಮಕ ದಳಕ್ಕೆ ಇನ್ನಷ್ಟು ಬಲ ತುಂಬಬೇಕಿದೆ. ಅಗ್ನಿಶಾಮಕ ಠಾಣೆ-ಹುದ್ದೆಗಳ ವಿವರ:
ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 25 ಮಂಜೂರಾತಿ ಹುದ್ದೆಗಳಿದ್ದು 19 ಹಾಲಿ ಹುದ್ದೆಗಳು ಭರ್ತಿಯಾಗಿವೆ. 6 ಹುದ್ದೆಗಳು ಖಾಲಿ ಇವೆ. ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳು ಖಾಲಿ ಇವೆ. ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳು ಖಾಲಿ ಇವೆ. ಹಿರೇಕೆರೂರು ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 15 ಹಾಲಿ ಹುದ್ದೆಗಳು ಭರ್ತಿಯಾಗಿವೆ. 12 ಹುದ್ದೆಗಳು ಖಾಲಿ ಇವೆ. ಶಿಗ್ಗಾವಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 16 ಹಾಲಿ ಹುದ್ದೆಗಳು ಭರ್ತಿಯಾಗಿವೆ. 11 ಹುದ್ದೆಗಳು ಖಾಲಿ ಇವೆ. ಬ್ಯಾಡಗಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 24 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು
ಖಾಲಿ ಇವೆ. ಸವಣೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 24 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು ಖಾಲಿ ಇವೆ.