Advertisement

ಎಸ್‌ಬಿಐ: 5,237 ಹುದ್ದೆಗಳಿಗೆ ನೇಮಕಾತಿ : ಅರ್ಜಿ ಸಲ್ಲಿಕೆಗೆ ಮೇ 17 ಕಡೆಯ ದಿನ

01:48 AM May 10, 2021 | Team Udayavani |

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ತನ್ನ ವಿವಿಧ ಶಾಖೆಗಳಲ್ಲಿ ಕ್ಲೆರಿಕಲ್‌ ಕೇಡರ್‌ನಲ್ಲಿ ಜೂನಿಯರ್‌ ಅಸೋಸಿಯೇಟ್‌ ಹುದ್ದೆಗಳಿಗೆ ಬಂಪರ್‌ ನೇಮಕಾತಿಯನ್ನು ಕೈಗೊಂಡಿದೆ. ಈ ನೇಮಕಾತಿ ಡ್ರೈವ್‌ ಮೂಲಕ 5,237 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಎಪ್ರಿಲ್‌ 27ರಂದು ಪ್ರಾರಂಭವಾಗಿದ್ದು, ಇದು ಮೇ 17ರ ವರೆಗೆ ಮುಂದುವರಿಯಲಿದೆ. ಆಸಕ್ತ ಅಭ್ಯರ್ಥಿಗಳು sbi.co.in ಅಥವಾ bank.sbi/careers ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Advertisement

ಅರ್ಹತೆ ಮತ್ತು ವಯೋಮಿತಿ: ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು ಅಥವಾ ಕೇಂದ್ರ ಸರಕಾರದ ಮಾನ್ಯತೆ ಪಡೆದ ಯಾವುದೇ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜತೆಗೆ ಅಭ್ಯರ್ಥಿಗಳು 20ರಿಂದ 28 ವರ್ಷ ವಯಸ್ಸಿನವರಾಗಿರಬೇಕು.

ಆಯ್ಕೆ ಪ್ರಕ್ರಿಯೆ: ಕ್ಲೆರಿಕಲ್‌ ಕೇಡರ್‌ನಲ್ಲಿ ಜೂನಿಯರ್‌ ಅಸೋಸಿಯೇಟ್‌ ಹು¨ªೆಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳು ಆನ್‌ಲೈನ್‌ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿದ ಸ್ಥಳೀಯ ಭಾಷಾ ಪರೀಕ್ಷೆಯ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಇದನ್ನು ಗಮನಿಸಿ: ಅಭ್ಯರ್ಥಿಗಳು ಒಂದು ರಾಜ್ಯ ದಲ್ಲಿ ಮಾತ್ರ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ಅಭ್ಯರ್ಥಿಗಳು ಒಮ್ಮೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ನಿರ್ದಿಷ್ಟ ರಾಜ್ಯದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಆ ರಾಜ್ಯ / ಯುಟಿ / ವಿಶೇಷ ಪ್ರದೇಶದ ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯಲ್ಲಿ ಪ್ರವೀಣರಾಗಿರಬೇಕು (ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದು) ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಅರ್ಜಿ ಶುಲ್ಕ :
ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ -750 ರೂ.
ಎಸ್ಸಿ / ಎಸ್ಟಿ / ಪಿಡಬ್ಲ್ಯುಡಿ – ಶುಲ್ಕವಿಲ್ಲ

Advertisement

ವೇತನ: ಪ್ರತೀ ತಿಂಗಳು
– 17, 900ರಿಂದ
– 47,920 ರೂ. ವರೆಗೆ

Advertisement

Udayavani is now on Telegram. Click here to join our channel and stay updated with the latest news.

Next