ಹಳಿಯಾಳ: ಜಿಲ್ಲೆ ಪ್ರತಿಭಾವಂತರ ನಾಡಾಗಿದ್ದರೂ ಸರ್ಕಾರಿ ಉದ್ಯೋಗ ಗಿಟ್ಟಿಸುವಲ್ಲಿ ಜಿಲ್ಲೆ ಜನ ವಿಫಲವಾಗುತ್ತಿದ್ದಾರೆಂದು ಧಾರವಾಡ ಕ್ಲಾಸಿಕ್ ಸ್ಟಡಿ ಸೆಂಟರ್ ಆಡಳಿತಾಧಿಕಾರಿ ಐ.ಜಿ. ಚೌಗಲಾ ಹೇಳಿದರು.
ಇಲ್ಲಿನ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಹಳಿಯಾಳ ಮತ್ತು ಕ್ಲಾಸಿಕ್ ಸ್ಟಡಿ ಸೆಂಟರ್ ಧಾರವಾಡ ಇವರ ವತಿಯಿಂದ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಸಭಾಭವನದಲ್ಲಿ ಪೊಲೀಸ್ ಹಾಗೂ ಇತರೆ ಸರ್ಕಾರಿ ಸೇವೆಗೆ ಸೇರಬಯಸುವ ಯವಕ, ಯವತಿಯರಿಗೆ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಉದ್ಯೋಗ ಪಡೆಯಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ ಎಂದ ಅವರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅಗತ್ಯ ಮಾಹಿತಿ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿಆರ್‌ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ಜಿಲ್ಲೆ ಯುವಕ-ಯುವತಿಯರು ಉದ್ಯೋಗ ಮಾಹಿತಿ ಹಾಗೂ ಮಾರ್ಗದರ್ಶನದ ಕೊರತೆಯಿಂದ ಸರ್ಕಾರಿ ಉದ್ಯೋಗ ಗಿಟ್ಟಿಸುವಲ್ಲಿ ವಿಫಲರಾಗುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಇದನ್ನು ಮನಗಂಡು ಸಂಸ್ಥೆ ಇಂತಹ ಕಾರ್ಯಗಾರಗಳನ್ನು ಏರ್ಪಡಿಸುತ್ತಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಡಿಪಿಐಟಿಐ ಪ್ರಾಂಶುಪಾಲ ದಿನೇಶ ನಾಯ್ಕ, ಕ್ಲಾಸಿಕ್ ಸ್ಟಡಿ ಸೆಂಟರ್ ಉಪನ್ಯಾಸಕ ವಿಜಯೇಂದ್ರ ಮಹರ್ಷಿ, ಈಶ್ವರ ಗಿರಿ, ಸಿಬಿಡಿ ಆರ್‌ಸೆಟಿಯ ಯೋಜನಾ ಸಂಯೋಜಕ ವಿನಾಯಕ ಚೌಹಾಣ, ಟ್ರಸ್ಟ್ ಸಿಬ್ಬಂದಿ ವಿವೇಕ ಹೆಗಡೆ, ಸಂಜೀವ ಜೋಷಿ, ಪ್ರಶಾಂತ ಪಾಟೀಲ್, ಪ್ರಕಾಶ ಮಿರಾಶಿ, ಸಚೀನ್ ಬೇಣಚೆಕರ, ಸುರೇಶ ಗಾವಡೆ, ಸಂತೋಷ ಶಿದ್ನಿಕೊಪ್ಪ, ವಿಷ್ಣು ಮಡಿವಾಳ ಇದ್ದರು.
ಸುಮಾರು 300 ಜನರು ಪಾಲ್ಗೊಂಡು ಅಗತ್ಯ ಮಾಹಿತಿ ಪಡೆದುಕೊಂಡರು.ಹಳಿಯಾಳದ ಸಿಪಿಐ ಬಿ.ಎಸ್. ಲೊಕಾಪುರ ಉಪಯುಕ್ತ ಮಾಹಿತಿ ನೀಡಿದರು.