Advertisement

Job for Reservation; ಉದ್ಯಮಗಳ ಹಿತಾಸಕ್ತಿಗೆ ಬದ್ಧ: ಎಂ. ಬಿ. ಪಾಟೀಲ್‌

12:23 AM Jul 18, 2024 | Team Udayavani |

ಬೆಂಗಳೂರು: ಖಾಸಗಿ ಉದ್ಯಮಗಳಲ್ಲಿ ಕೂಡ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿ
ಡಲಾಗುವುದು. ಇದೇ ಸಂದರ್ಭದಲ್ಲಿ ಉದ್ಯಮಗಳ ಹಿತಾಸಕ್ತಿಗಳನ್ನು ಸಹ ಕಾಪಾಡಲಾಗುವುದು ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್‌ ಹೇಳಿದ್ದಾರೆ.

Advertisement

ಈ ವಿಚಾರವಾಗಿ ಸದ್ಯದಲ್ಲೇ  ಸಿಎಂ ಸಿದ್ದರಾಮಯ್ಯ, ಐಟಿ-ಬಿಟಿ, ಕಾನೂನು ಮತ್ತು ಕಾರ್ಮಿಕ ಸಚಿವರ ಜತೆ ಚರ್ಚಿಸಿ, ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದರು. ಸ್ಥಳೀಯರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಬದ್ಧವಾಗಿದೆ. ಹಾಗೆಯೇ ಉದ್ಯಮ ವಲಯದವರ ಹಿತಾಸಕ್ತಿಗೂ ಧಕ್ಕೆಯಾಗದಂತೆ ನಿಗಾ ವಹಿಸಲಾಗುವುದು. ಈ ಕುರಿತು ಎಲ್ಲರ ಜತೆಗೂ ಮಾತುಕತೆ ನಡೆಸಲಾಗುವುದು ಎಂದರು.

ರಾಜ್ಯದ ಉದ್ಯಮಗಳಿಗೆ ಕೇರಳ, ಆಂಧ್ರ ಆಹ್ವಾನ

ಬೆಂಗಳೂರು/ಹೊಸದಿಲ್ಲಿ: ಕರ್ನಾಟಕದಲ್ಲಿರುವ ಖಾಸಗಿ ಸಂಸ್ಥೆಗಳನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಸ್ಥಳಾಂತರಗೊಳ್ಳುವಂತೆ ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್‌ ಆಹ್ವಾನಿಸಿದ್ದಾರೆ. ಜತೆಗೆ ಕೇರಳದ ಕಾನೂನು ಸಚಿವ ಪಿ. ರಾಜೀವ ಕೂಡ ನಮ್ಮಲ್ಲಿ ಉತ್ತಮ ಸೌಲಭ್ಯ ನೀಡುತ್ತೇವೆಂದು ಆಮಿಷವೊಡ್ಡಿದ್ದಾರೆ.

ಸಾಫ್ಟ್ವೇರ್‌ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಘಟನೆ (ಎನ್‌ಎಎಸ್‌ಎಸ್‌ಸಿಒಎಂ) ಅನ್ನು ಉಲ್ಲೇಖೀಸಿ ಟ್ವೀಟ್‌ ಮಾಡಿರುವ ನಾರಾ ಲೋಕೇಶ್‌ ಎನ್‌ಎಎಸ್‌ಎಸ್‌ಸಿಒಎಂ ಸದಸ್ಯರೇ , ನಿಮ್ಮ ಹತಾಶೆ ನಮಗೆ ಅರ್ಥವಾಗುತ್ತದೆ. ನೀವು ನಿಮ್ಮ ಉದ್ಯಮಗಳನ್ನು ವಿಸ್ತರಿಸುವ ಅಥವಾ ಸ್ಥಳಾಂತರಿಸಲು ಯೋಜಿಸಿದರೆ ನಾವು ನಿಮ್ಮನ್ನು ಸ್ವಾಗತಿಸಲು ಸಿದ್ದರಾಗಿದ್ದೇವೆ.\

Advertisement

ವಿಶಾಖಪಟ್ಟಣಂನಲ್ಲಿರುವ ನಮ್ಮ ಐಟಿ, ಐಟಿ ಸೇವೆಗಳು, ಎಐ ಮತ್ತು ಡೆಟಾ ಸೆಂಟರ್‌ ಕ್ಲಸ್ಟರ್‌ಗಳಿಗೆ ನೀವು ಸ್ಥಳಾಂತರಗೊಳ್ಳಬಹುದು. ಅತ್ಯುತ್ತಮ ದರ್ಜೆಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಸರಕಾರದಿಂದ ಯಾವುದೇ ನಿರ್ಬಂಧವಿಲ್ಲದೇ ಅತ್ಯಂತ ಸೂಕ್ತ ಪ್ರತಿಭೆಗಳನ್ನೂ ಒದಗಿಸುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next