Advertisement
ಅವರು ಗುರುವಾರ ಇಲ್ಲಿನ ಕೊಟ್ಟಾರ ಚೌಕಿ ಬಳಿಯ ಎ.ಜೆ.ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ರಾಜ್ಯ ಕೌಶಲಾಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಮತ್ತು ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮಂಗಳೂರು ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಯುವಜನರಿಗೆ ಉದ್ಯೋಗಾವಕಾಶಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಗಳೂ ಸುಲಭ ವಾಗಿ ಸಿಗಬೇಕೆನ್ನುವ ಉದ್ದೇಶದಿಂದ ರಾಮನಗರದಲ್ಲಿ “ಸ್ಕಿಲ್ ಹಬ್’ ಪ್ರಾರಂಭಿಸಲಾಗುತ್ತಿದೆ. ಅಲ್ಲಿ ಕೌನ್ಸೆಲಿಂಗ್ ಮೂಲಕ ಕೌಶಲ ತರಬೇತಿ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಮಾರ್ಗದರ್ಶನ ಹಾಗೂ ಸಾಫ್ಟ್ ಸ್ಕಿಲ್ಸ್ ಗಳನ್ನು ಕೂಡ ಕಲಿಸಲಾಗುವುದು ಎಂದು ಸಚಿವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಅತ್ಯುತ್ತಮ ಶೈಕ್ಷಣಿಕ ಸಂಸ್ಕೃತಿ ಮತ್ತು ಸಂಪರ್ಕ ವ್ಯವಸ್ಥೆ ಹೊಂದಿರುವ ಮಂಗಳೂರಿನಲ್ಲಿ ಸುಸಜ್ಜಿತ ಐಟಿ ಪಾರ್ಕ್ ಸ್ಥಾಪನೆ ಅಗತ್ಯವಿದ್ದು, ಭೂಮಿ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಾವು ಸಿದ್ಧ ಎಂದರು.
ಎ.ಜೆ. ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ| ಎ.ಜೆ. ಶೆಟ್ಟಿ ಅವರು, ಉದ್ಯೋಗ ಮೇಳ ಆಗಾಗ ನಡೆಯುತ್ತಿರಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ವಿವಿಧ ನಿಗಮಗಳ ಅಧ್ಯಕ್ಷರಾದ ನಿತಿನ್ ಕುಮಾರ್, ಹರಿಕೃಷ್ಣ ಬಂಟ್ವಾಳ, ಸಂತೋಷ್ ಕುಮಾರ್ ರೈ ಬೋಳಿಯಾರು, ರವೀಂದ್ರ ಶೆಟ್ಟಿ, ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಸಂದೀಪ್ ಮೈನಿ, ರೋಬೊಸಾಫ್ಟ್ ಸಂಸ್ಥೆಯ ಮುಖ್ಯಸ್ಥ ರೋಹಿತ್ ಭಟ್, ಸುಧಾಕರ ಗುಡಿಪಾಟಿ ಉಪಸ್ಥಿತರಿದ್ದರು. ಕೌಶಲಾಭಿವೃದ್ಧಿ ನಿಗಮದ ಸಿಇಒ ಸಂಜೀಬ್ ಗುಪ್ತಾ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಅಂತಾರಾಷ್ಟ್ರೀಯ ವಲಸೆ ಕೇಂದ್ರ, ಇಂಗ್ಲಿಷ್ ಕಲಿಕಾ ಲ್ಯಾಬ್ ಉದ್ಘಾಟನೆ :
ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮಂಗಳೂರು ಪ್ರಾದೇಶಿಕ ಕಚೇರಿಗೆ ಸಚಿವ ಡಾ| ಅಶ್ವತ್ಥನಾರಾಯಣ ಚಾಲನೆ ನೀಡಿದರು. ಮೇಕ್ ಇಂಡಿಯಾ ಕೇಪಬಲ್ ಕಾರ್ಯಕ್ರಮದಡಿ ಇಂಗ್ಲಿಷ್ ಕಲಿಕಾ ಲ್ಯಾಬ್ ಅನ್ನು ಲೋಕಾರ್ಪಣೆಗೊಳಿಸಿದ ಅವರು, ಈ ಲ್ಯಾಬ್‌ನಲ್ಲಿ ಪ್ರತೀ 3 ತಿಂಗಳಿಗೊಮ್ಮೆ ತಲಾ 300 ಜನರಿಗೆ ಉದ್ಯೋಗಕ್ಕೆ ಅಗತ್ಯವಾಗಿರುವ ಇಂಗ್ಲಿಷ್ ಭಾಷಾ ಕೌಶಲವನ್ನು ಕಲಿಸಲಾಗುವುದು ಎಂದು ಹೇಳಿದರು.
ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಉದ್ಯೋಗ: ಒಪ್ಪಂದ :
ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಕರ್ನಾಟಕ ರಾಜ್ಯ ಕೌಶಲಾಭಿವೃದ್ಧಿ ನಿಗಮ ಮತ್ತು ಮಂಗಳೂರಿನ ಮೀನುಗಾರಿಕೆ ಕಾಲೇಜು ಒಪ್ಪಂದ ಮಾಡಿ ಕೊಂಡಿದ್ದು, ಸಚಿವ ಡಾ| ಅಶ್ವತ್ಥನಾರಾಯಣ ಮತ್ತು ಮೀನುಗಾರಿಕೆ ಕಾಲೇಜಿನ ಫಿಶರೀಸ್ ಎಕನಾಮಿಕ್ಸ್ ವಿಭಾಗದ ಮಖ್ಯಸ್ಥ ಡಾ| ಎಸ್.ಆರ್. ಸೋಮಶೇಖರ್ ಸಹಿ ಹಾಕಿದರು.