ಪಿರಿಯಾಪಟ್ಟಣ: ಕುಟುಂಬದ ಭದ್ರತೆ, ಜೀವನ ನಿರ್ವಹಣೆಗೆ ಉದ್ಯೋಗ ಅತ್ಯಗತ್ಯವಾಗಿದ್ದು ಪ್ರತಿಯೊಬ್ಬರೂ ಉದ್ಯೋಗ ಮೇಳಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಐಟಿಐ ಕಾಲೇಜಿನ ಸಹಾಯಕ ಶಿಶುಕ್ಷು ಅಧಿಕಾರಿ ಸಿ.ಎಲ್.ಸೋಮಶೇಖರ್ ಹೇಳಿದರು.
ಪಟ್ಟಣದ ಹರವೆಮಲ್ಲರಾಜ ಪಟ್ಟಣದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ನ್ಯಾಸಿನಲ್ ಏರೋಸ್ಪೆಸ್ ಲ್ಯಾಬೋಟರ್ (ಸಿಎಸ್‌ಐಆರ್ -ಎನ್‌ಎಎಲ್) ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಜೀವನ ನಿರ್ವಹಣೆಗೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರ ಯಾವುದಾದರೂ ಸರಿಯೇ ನಿರುದ್ಯೋಗಿಗಳು ಕೆಲಸ ನಿರ್ವಹಿಸಲು ಸಿದ್ಧರಾಗಿರಬೇಕು. ವಿದ್ಯೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆ, ನೈಪುಣ್ಯ, ಕೌಶಲವನ್ನು ಉದ್ಯೋಗದಾತ ಕಂಪನಿಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಬೇಕು. ಪ್ರಸ್ತುತ ದಿನಗಳಲ್ಲಿ ಕ್ಯಾಂಪಸ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ತಾಂತ್ರಿಕ ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆದು ಆ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಲು ಇಂಥ ಉದ್ಯೋಗಮೇಳಗಳು ಸಹಕಾರಿ ಯಾಗುತ್ತವೆ, ಆದ್ದರಿಂದ ನಿರುದ್ಯೋಗಿ ಯುವಕ, ಯುವತಿಯರು ಸಾಂಪ್ರದಾಯಿಕ ಶಿಕ್ಷಣವನ್ನೇ ನಂಬಿ ಕೂರದೆ ತಾಂತ್ರಿಕ ಶಿಕ್ಷಣವನ್ನು ಪಡೆದು ಉದ್ಯೋಗ ಪಡೆದುಕೊಳ್ಳುಲು ಮುಂದೆ ಬರಬೇಕಿದೆ ಎಂದು ಕಿವಿಮಾತು ಹೇಳಿದರು.
ಎನ್‌ಎಎಲ್ ಚೀಫ್ ಸೈಂಟಿಕ್ಸ್ ಡಾ.ಸಿ.ಎನ್.ಸತ್ಯನಾರಾಯಣ್ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ರಾಜ್ಯದ ಎಲ್ಲಾ ಭಾಗಗಳಲ್ಲೂ ಐಟಿಐ, ಡಿಪ್ಲೊಮಾ ಪಡೆದ ಯುವಕ, ಯುವತಿ ಯರಿಗಾಗಿ ಅಪ್ರಂಡೆಸಿಪ್ ಕ್ಯಾಂಪಸ್ ಮೇಳಗಳನ್ನು ಆಯೋಜಿಸಿಕೊಂಡು ಬಂದಿ ದ್ದೇವೆ. ಇದರಲ್ಲಿ ಹೆಚ್ಚಿನದಾಗಿ ನಾವು ಗ್ರಾಮೀಣ ಪ್ರದೇಶದ ಯುವಕ, ಯುವತಿ ಯರಿಗೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ಉದ್ಯೋಗವನ್ನು ಕಲ್ಪಿಸಿ ಜೀವನ ನಿರ್ವ ಹಣೆಗೆ ಸಹಕಾರ ನೀಡುತ್ತೇವೆ ಎಂದರು.
ಇಂದು ಪಿರಿಯಾಪಟ್ಟಣ- ಬೆಟ್ಟದಪುರ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಹೊರ ಬಂದ ಉದ್ಯೋಗಾ ಕಾಂಕ್ಷಿಗಳಿಗೆ ಈ ಕಾರ್ಯಕ್ರಮವನ್ನು ಹಮ್ಮಿ ಕೊಂಡು ಇಲ್ಲಿ ನೋಂದಣಿ ಮಾಡಿಕೊಂಡಿ ದ್ದವರ ಪೈಕಿ 48 ಮಂದಿ ಯುವಕ ಯುವತಿ ಯರಲ್ಲಿ 27 ಮಂದಿ ವಿವಿಧ ಉದ್ಯೋಗಗಳಿಗೆ ಆಯ್ಕೆಯಾಗಿ ಅವರಿಗೆ ಆಯ್ಕೆ ಪತ್ರವನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯುವಕ, ಯುವತಿಯರಿಗೆ ಅವಕಾಶ ಕಲ್ಪಿಸುತ್ತೇವೆ ಎಂದರು.
ಸುಷ್ಮಾ ಎಂಟರ್ ಪ್ರೈಸಸ್, ಗೋದ್ರೇಜ್ ಮೆಟೀರಿಯಲ್ ಹ್ಯಾಂಡ್ಲಿಂಗ್ ಎಕ್ಯೂಮೆಂಟ್ಸ್ ಸಂಸ್ಥೆಗಳು ಪಾಲ್ಗೊಂಡಿದ್ದವು. ಪ್ರಾಂಶುಪಾಲ ಶ್ರೀಧರ್, ಉಪನ್ಯಾಸಕರಾದ ವಾಸುದೇವ್, ರಾಜು, ಕಿರಣ್ ಮಂಜುನಾಥ್, ಪೂಜಾ, ಸುಪ್ರಿತಾ ಇತರರು ಇದ್ದರು.