Advertisement

ಉದ್ಯೋಗ ಸೃಷ್ಟಿ ಕರ್ನಾಟಕವೇ ಮುಂದೆ; ಭವಿಷ್ಯ ನಿಧಿ ಮಂಡಳಿ ದಾಖಲೆಗಳಲ್ಲಿ ಉಲ್ಲೇಖ

01:35 PM Aug 22, 2022 | Team Udayavani |

ನವದೆಹಲಿ: ಮುಂದಿನ ಒಂದೂವರೆ ವರ್ಷಗಳಲ್ಲಿ ಹತ್ತು ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರಧಾನಿ ಮೋದಿ ಕೇಂದ್ರದ ಇಲಾಖೆಗಳಿಗೆ ಸೂಚನೆ ನೀಡಿದ್ದರು. ಅದಕ್ಕೆ ಪೂರಕವಾಗಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಸಾಮಾನ್ಯ ಕ್ಷೇತ್ರ (ಫಾರ್ಮಲ್‌ ಸೆಕ್ಟರ್‌)ಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ.

Advertisement

ಈ ಆರೂ ರಾಜ್ಯಗಳಲ್ಲಿ ಎಲ್ಲಾ ವಯೋಮಿತಿಗಳಲ್ಲಿ 12.6 ಲಕ್ಷ ಮಂದಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುವವರ ವಿವರಗಳು ಉದ್ಯೋಗಿಗಳ ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ)ಯಲ್ಲಿ ಸೇರ್ಪಡೆಯಾಗಿದೆ.

ಶೇಕಡಾವಾರು ಹೇಳುವುದಿದ್ದರೆ 68.66ಕ್ಕೆ ಏರಿಕೆಯಾಗಿದೆ. ಪುರುಷರಿಗೆ ಹೋಲಿಕೆ ಮಾಡಿದರೆ, 41 ಸಾವಿರ ಮಹಿಳೆಯರು ಹೆಚ್ಚಾಗಿ ಉದ್ಯೋಗ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದಾರೆ.

ಶೇ.8.9ರ ವರೆಗೆ ಏರಿಕೆ:
ಜೂನ್‌ ಅಂತ್ಯಕ್ಕೆ ಮುಕ್ತಾಯಗೊಂಡಂತೆ ಸಾಮಾನ್ಯ ಕ್ಷೇತ್ರದಲ್ಲಿ ಶೇ. 8.9ರ ವರೆಗೆ ಉದ್ಯೋಗ ಸೃಷ್ಟಿಯಾಗಿದೆ. ಸಾಂಖ್ಯಿಕವಾಗಿ ಹೇಳುವುದಿದ್ದರೆ ಮೇನಲ್ಲಿ 16. 8 ಲಕ್ಷ ಉದ್ಯೋಗಗಗಳು ಸೃಷ್ಟಿಯಾಗಿದ್ದರೆ ಜೂನ್‌ನಲ್ಲಿ 18.3 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.

ಉದ್ಯೋಗಿಗಳ ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ)ಯಲ್ಲಿ ದಾಖಲಾಗಿರುವ ಅಂಶಗಳಿಂದ ಇದು ದೃಢಪಟ್ಟಿದೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. 7,80,000 ಮಂದಿ ಮತ್ತೆ ವಿವಿಧ ಉದ್ಯೋಗ ಕ್ಷೇತ್ರಗಳಿಗೆ ಮರಳಿದ್ದಾರೆ. ಇದೂ ಕೂಡ ಉದ್ಯೋಗ ಪಡೆದವರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

Advertisement

55 ಸಾವಿರ – ಜೂನ್‌ನಲ್ಲಿ ಸೇರ್ಪಡೆಯಾದ ಉದ್ಯೋಗಗಳು
ಶೇ.22.09- ಮಹಿಳೆಯರ ಪ್ರಮಾಣ
16.8 ಲಕ್ಷ ಉದ್ಯೋಗ- ಮೇನಲ್ಲಿ ಸೃಷ್ಟಿಯಾದದ್ದು
18.3 ಲಕ್ಷ ಉದ್ಯೋಗ- ಜೂನ್‌ನಲ್ಲಿ ಸೇರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next