Advertisement

Manipal ಸಂಸ್ಥೆಗಳಿಂದ ಉದ್ಯೋಗ ಸೃಷ್ಟಿ

09:59 AM Nov 03, 2023 | Team Udayavani |

ಮಣಿಪಾಲ: ಮಣಿಪಾಲವು ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿರುವ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ ಅಭಿವೃದ್ಧಿ ಸಾಧ್ಯವಾಗಿಸಿದ ಕೀರ್ತಿ ಪೈ ಕುಟುಂಬಕ್ಕೆ ಸಲ್ಲುತ್ತದೆ ಎಂದು ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.

Advertisement

ಮಣಿಪಾಲ ಎನರ್ಜಿ ಮತ್ತು ಇನ್ಫ್ರಾಟೆಕ್‌ ಲಿಮಿಟೆಡ್‌ನ‌ (ಎಂಇ ಐಎಲ್‌) ನವೀಕೃತ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಣಿಪಾಲ ಎನರ್ಜಿ ಮತ್ತು ಇನ್ಫ್ರಾಟೆಕ್‌ ಸಂಸ್ಥೆ ನಿರ್ಮಾಣ ವಲಯ, ಅಭಿವೃದ್ಧಿ ಕ್ಷೇತ್ರದಲ್ಲಿ ಹಲವಾರು ಮಂದಿಗೆ ಉದ್ಯೋಗ ನೀಡುತ್ತಿದೆ. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದ ಅವರು, ನೂರಾರು ಜನರಿಗೆ ಉಪಯೋಗವಾಗುವಂತೆ ಸಂಸ್ಥೆ ಗಳು ಕಾರ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಉದಯವಾಣಿ, ತರಂಗ ಮೂಲಕ ಸಾತ್ವಿಕ ವಿಚಾರವನ್ನು ಜನರಿಗೆ ತಲುಪಿಸುವ ಕೆಲಸವೂ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಣಿಪಾಲ್‌ ಟೆಕ್ನಾಲಜಿಸ್‌ ಸಂಸ್ಥೆಯ (ಎಂಟಿಎಲ್‌) ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಟಿ. ಗೌತಮ್‌ ಪೈ ಅವರು ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಗುಣಮಟ್ಟದ ಮೌಲ್ಯಯುತ ಕಾರ್ಯದ ಮೂಲಕ ವಿಶೇಷ ಮನ್ನಣೆ ಪಡೆದಿದೆ ಎಂದರು.

ಮಣಿಪಾಲ ಮೀಡಿಯಾ ನೆಟ್‌ ವರ್ಕ್‌ ಲಿಮಿಟೆಡ್‌ನ‌ (ಎಂಎಂಎನ್‌ ಎಲ್‌) ಕಾರ್ಯನಿರ್ವಾಹಕ ಅಧ್ಯಕ್ಷ ರಾದ ಟಿ. ಸತೀಶ್‌ ಯು. ಪೈ, ಎಂಎಂ ಎನ್‌ಎಲ್‌ನ ವನಿತಾ ಪೈ, ಎಂಇಐಎಲ್‌ ನ ಎಂಡಿ ಮತ್ತು ಸಿಇಒ ಸಾಗರ್‌ ಮುಖೋಪಾಧ್ಯಾಯ, ಎಂಟಿಎಲ್‌ ನ ಎಂಡಿ ಮತ್ತು ಸಿಇಒ ಅಭಯ್‌ ಗುಪ್ತೆ ಅತಿಥಿಗಳಾಗಿದ್ದರು.

Advertisement

ಎಂಇಐಎಲ್‌ನ ವಿಶ್ವನಾಥ್‌ ಚೌವ್ಹಾಣ್‌, ಸತೀಶ್‌ ಜಡ್ಡು ಉಪಸ್ಥಿತರಿದ್ದರು. ಆನಂದ್‌ ಕೆ. ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next