Advertisement

ಜಾಬ್‌ ಕಾರ್ಡ್‌-ಕೂಲಿ ಹಣ ಪಾವತಿಸಲು ಆಗ್ರಹ

03:22 PM Apr 19, 2022 | Team Udayavani |

ದೇವದುರ್ಗ: ಕೆಲ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿ ಆಗುತ್ತಿಲ್ಲ. ಜಾಬ್‌ ಕಾರ್ಡ್‌, ಕೆಲಸದ ಹಣ ಸರಿಯಾಗಿ ಕೂಲಿಕಾರರಿಗೆ ಪಾವತಿ ಆಗುತ್ತಿಲ್ಲ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ತಾಪಂ ಕಚೇರಿ ಎದುರು ಸೋಮವಾರ ಪ್ರತಿಭಟಿಸಿತು.

Advertisement

ಇಂತಹ ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಇಲ್ಲಿವರೆಗೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೆಲ ಗ್ರಾಪಂನಲ್ಲಿ ಎನ್‌ಎಂಆರ್‌ ಜಿರೊ ಆಗಿರುತ್ತದೆ. ಹೀಗಾಗಿ ಕೂಲಿಕಾರರಿಗೆ ಸಕಾಲಕ್ಕೆ ಪೆಮೆಂಟ್‌ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ನ್ಯೂನ್ಯತೆಗಳು ಸರಿಪಡಿಸಬೇಕು. ರಾಮದುರ್ಗ, ಕೊಪ್ಪರು, ಮುಂಡರಗಿ, ಬಿ.ಗಣೇಕಲ್‌ ಸೇರಿದಂತೆ ಇತರೆ ಗ್ರಾಪಂನಲ್ಲಿ ಖಾತ್ರಿ ಯೋಜನೆಯಲ್ಲಿ ಕೂಲಿಕಾರರಿಗೆ ಸಮಸ್ಯೆ ತಂದಿದೆ. ಜಾಬ್‌ಕಾರ್ಡ್‌, ಪೆಮೆಂಟ್‌ ವಿಳಂಬ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಗುರುರಾಜ್‌, ಹನಮಂತ್ರಾಯ, ಹುಸೇನಪಾಷ್‌, ಅಮರೇಶ, ಈರಣ್ಣ ತಾತಾ, ರೇಣುಕಾ, ದುರಗಮ್ಮ, ಲಕ್ಷ್ಮೀ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next