ರಾಮನಗರ: ಬೇಸಿಗೆ ಸಂದ ರ್ಭ ದಲ್ಲಿ ಗ್ರಾಮೀಣ ಭಾಗದ ಕಾರ್ಮಿ ಕ ರಿಗೆ ಉದ್ಯೋಗ ಒದ ಗಿ ಸಲು ದುಡಿ ಯೋಣ ಬಾ ಅಭಿ ಯಾ ನ ವನ್ನು ಜೂನ್ 15ರವ ರೆಗೆ ಹಮ್ಮಿ ಕೊ ಳ್ಳ ಲಾ ಗಿದೆ ಎಂದು ಜಿಪಂ ಸಿಇಒ ಇಕ್ರಂ ತಿಳಿ ಸಿ ದ್ದಾರೆ.
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದ ನಾಗ ರೀಕರು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ತೆರ ಳು ವು ದುಂಟು. ಕೆಲ ವ ರಿಗೆ ಉದ್ಯೋಗ ಸಿಗು ತ್ತದೆ, ಬಹು ತೇ ಕ ರಿಗೆ ದೊರೆ ಯದೆ ನಿರಾಸೆ ತಂದು ಕೊ ಳ್ಳು ತ್ತಾರೆ. ಸದ್ಯ ಉದ್ಯೋಗ ಖಾತ್ರಿ ಯೋಜ ನೆ ಯಡಿ ಗ್ರಾಮೀಣ ಭಾಗದ ಜನ ರಿಗೆ ಉದ್ಯೋಗ ಖಾತ್ರಿ ದೊರೆ ಯು ತ್ತಿದ್ದು, ದುಡಿ ಯೋಣ ಬಾ ಅಭಿ ಯಾನ ಮತ್ತೂಂದು ವಿಶೇಷ ಕಾರ್ಯಕ್ರಮವಾಗಲಿದೆ.
ಬೇಸಿ ಗೆ ಯಲ್ಲಿ 60 ದಿನ ಗಳ ಉದ್ಯೋ ಗದ ಖಾತ್ರಿ ಈ ಅಭಿ ಯಾನ ನೀಡ ಲಿದೆ. ಜೂನ್ 15ರವ ರೆಗೆ ಈ ಅಭಿ ಯಾನ ಜಾರಿ ಯ ಲ್ಲಿ ರು ತ್ತದೆ ಎಂದು ಪತ್ರಿಕಾ ಹೇಳಿಕೆ ತಿಳಿ ಸಿ ದ್ದಾರೆ. 60 ದಿನಕ್ಕೆ 17 ಸಾವಿರ ರೂ.ಗಳಿ ಕೆ ಬೇಸಿಗೆ ಅವಧಿಯಲ್ಲಿ 60 ದಿನಗಳ ಕೆಲಸ ಮಾಡಿದರೆ 17,340 ರೂ. ಗಳಿಸಬಹುದು. ಹೀಗೆ ಗಳಿ ಸಿದ ಹಣ ವನ್ನು ಗ್ರಾಮೀ ಣರು ಮುಂದೆ ಕೃಷಿ ಚಟು ವ ಟಿ ಕೆಗೆ ಅಥವಾ ಮಕ್ಕಳ ಶಾಲಾ, ಕಾಲೇ ಜಿನ ವೆಚ್ಚಕ್ಕೆ ಸಹಾ ಯ ಕ ವಾ ಗ ಲಿದೆ. ಬೇರೆ ಸ್ಥಳಗಳಿಗೆ ಹೋಗಿ ಕೆಲಸ ಹುಡುಕುವ ಬದಲು, ವಾಸಿಸುವ ಸ್ಥಳದಲ್ಲೇ ಕೆಲಸ ಪಡೆದು ಉತ್ತಮವಾಗಿ ಜೀವನ ನಡೆಸಬಹುದು. ಮಾ.23 ರಿಂದ ಮಾ.31 ರವರೆಗೆ ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗುವುದು.
ಕೆಲಸದ ಬೇಡಿಕೆ ಸಲ್ಲಿಸುವ ಕೂಲಿಕಾರರಿಗೆ ಕೆಲಸ ಒದಗಿಸಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿ ಮತ್ತು ಕಾಮಗಾರಿ ಪ್ರಾರಂಭಕ್ಕೆ ಬೇಕಿರುವ ಪೂರ್ವಸಿದ್ಧತೆ ಮಡಿಕೊಳ್ಳಲಾಗುವುದು. ಸಮಿತಿ ರಚನೆ: ಅಭಿಯಾನದ ಉಸ್ತುವಾರಿಗಾಗಿ ಜಿÇÉೆಯಲ್ಲಿ 3 ಹಂತದಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಅಧಿ ಕಾ ರಿ ಗ ಳನ್ನು ಒಳ ಗೊಂಡ ತಂಡ, ತಾಲೂಕು ಮಟ್ಟದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ ಹಾಗೂ ಗ್ರಾಪಂ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ಕಾರ್ಯನಿರ್ವಹಿಸಲಿದೆ ಎಂದು ಸಿಇಒ ಇಕ್ರಂ ತಿಳಿಸಿದ್ದಾರೆ.