Advertisement

ಹಾಲಿವುಡ್‌ನ ಬಹುನಿರೀಕ್ಷಿತ ‘Joker 2ʼ ಸಿನಿಮಾದ ಪೋಸ್ಟರ್‌ ಔಟ್:‌ ಟ್ರೇಲರ್‌ ಡೇಟ್‌ ರಿವೀಲ್

11:13 AM Apr 03, 2024 | Team Udayavani |

ವಾಷಿಂಗ್ಟನ್:‌ 2019 ರಲ್ಲಿ ಹಾಲಿವುಡ್‌ ನಲ್ಲಿ ತೆರಕಂಡ ʼಜೋಕರ್‌ʼ ಎನ್ನುವ ಸಿನಿಮಾ ದೊಡ್ಡ ಹಿಟ್‌ ಆಗಿತ್ತು. ಇದೀಗ ಈ ಸಿನಿಮಾದ ಸೀಕ್ವೆಲ್‌ ತೆರೆಗೆ ಸಿದ್ದವಾಗಿದೆ. ಪೋಸ್ಟರ್‌ ಮೂಲಕ ʼಜೋಕರ್‌ -2ʼ ಹೊಸ ಅಪ್ಡೇಟ್‌ ವೊಂದನ್ನು ನೀಡಿದೆ.

Advertisement

ವಾರ್ನರ್ ಬ್ರದರ್ಸ್ ಪ್ರೂಡಕ್ಷನ್‌ ಹೌಸ್ (Warner Bros) ಇತ್ತೀಚೆಗೆ  ಟಾಡ್ ಫಿಲಿಪ್ಸ್ ನಿರ್ದೇಶನದ ಹಾಲಿವುಡ್‌ ನ ಬಹುನಿರೀಕ್ಷಿತ ‘ಜೋಕರ್: ಫೋಲಿ ಡ್ಯೂಕ್ಸ್'((Joker: Folie Deux) ಸಿನಿಮಾದ ಮೊದಲ ಪೋಸ್ಟರ್‌ ರಿಲೀಸ್ ಮಾಡಿ, ಟ್ರೇಲರ್‌ ರಿಲೀಸ್‌ ಡೇಟ್‌ ನ್ನು ರಿವೀಲ್‌‌ ಮಾಡಿದೆ.

ಮ್ಯೂಸಿಕಲ್ ಸೈಕಲಾಜಿಕಲ್ ಥ್ರಿಲ್ಲರ್ ʼಜೋಕರ್‌ -2ʼ ನಲ್ಲಿ ಜೋಕ್ವಿನ್ ಫೀನಿಕ್ಸ್ ಜೊತೆ ಲೇಡಿ ಗಾಗಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‌

‌ಪೋಸ್ಟರ್‌ನಲ್ಲಿ ಜೋಕ್ವಿನ್‌ನ ಪಾತ್ರವನ್ನು ತೋರಿಸಲಾಗಿದ್ದು, (ಆರ್ಥರ್ ಫ್ಲೆಕ್- ಜೋಕರ್) ಹಾರ್ಲೆ ಕ್ವಿನ್(ಲೇಡಿ ಗಾಗಾ) ಪಾತ್ರವನ್ನು ನೃತ್ಯದ ಭಂಗಿಯಲ್ಲಿ ತೋರಿಸಲಾಗಿದೆ.

ಇದೇ ಏಪ್ರಿಲ್‌ 9 ರಂದು ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ‘ಜೋಕರ್ 2’ ಅಕ್ಟೋಬರ್ 4, 2024 ರಂದು ತೆರೆ ಕಾಣಲಿದೆ.

Advertisement

ಸಿನಿಮಾದಲ್ಲಿ ಜೋಕ್ವಿನ್ ಫೀನಿಕ್ಸ್, ಲೇಡಿ ಗಾಗಾ,ಝಾಜಿ ಬೀಟ್ಜ್, ಕ್ಯಾಥರೀನ್ ಕೀನರ್ ,ಬ್ರೆಂಡನ್ ಗ್ಲೀ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next