Advertisement

ಹುತಾತ್ಮ ಔರಂಗಜೇಬ್‌ ಸಹೋದರರು ಸೇನೆಗೆ

12:36 AM Jul 24, 2019 | mahesh |

ರಜೌರಿ: ದಕ್ಷಿಣ ಕಾಶ್ಮೀರದಲ್ಲಿ ಯೋಧ ಔರಂಗಜೇಬ್‌ ಅವರು ಭಯೋತ್ಪಾದಕರಿಂದ ಅಪಹರಣಕ್ಕೀಡಾಗಿ ಶವವಾಗಿ ಪತ್ತೆಯಾದ 13 ತಿಂಗಳ ಬಳಿಕ, ಈಗ ಅದೇ ಔರಂಗಜೇಬ್‌ರ ಇಬ್ಬರು ಸಹೋದರರು ಕೂಡ ಸೇನೆಗೆ ಸೇರ್ಪಡೆಯಾಗಿದ್ದಾರೆ.

Advertisement

ಅಷ್ಟೇ ಅಲ್ಲ, ಅಣ್ಣನ ಸಾವಿಗೆ ಪ್ರತೀಕಾರ ತೀರಿಸಿಯೇ ಸಿದ್ಧ ಎಂಬ ಶಪಥವನ್ನೂ ಮಾಡಿದ್ದಾರೆ. ಹುತಾತ್ಮನ ಸಹೋದರರಾದ ಮೊಹಮ್ಮದ್‌ ತಾರೀಖ್‌, ಮೊಹಮ್ಮದ್‌ ಶಬೀರ್‌ ಅವರು ಟೆರಿಟೋರಿಯಲ್‌ ಆರ್ಮಿಯ 156 ಇನ್‌ಫೆಂಟ್ರಿ ಬಟಾಲಿಯನ್‌ಗೆ ಸೋಮವಾರ ಸೇರ್ಪಡೆ ಆಗಿದ್ದಾರೆ. ತಾವಿಬ್ಬರೂ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ “ಆಪರೇಷನ್‌ ಆಲ್‌ ಔಟ್‌’ನಲ್ಲಿ ಭಾಗಿಯಾಗಲು ಬಯಸಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next