ಶ್ರೀನಗರ: ಭಯೋತ್ಪಾದನೆಯನ್ನು ನಿಗ್ರಹಿಸಲು ಕೆಲಸ ಮಾಡುತ್ತಿರುವ ಜಮ್ಮು ಕಾಶ್ಮೀರದ ಎಲ್ ಜಿ ಆಡಳಿತವು ಭಯೋತ್ಪಾಕರೊಂದಿಗೆ ಸಂಪರ್ಕ ಹೊಂದಿರುವ ಕಾರಣದಿಂದ ಮೂವರು ಸರ್ಕಾರಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್‌ಒ ಫಹೀಮ್ ಅಸ್ಲಾಂ, ಕಂದಾಯ ಇಲಾಖೆಯ ಅಧಿಕಾರಿ ಮುರಾವತ್ ಹುಸೇನ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಅರ್ಷಿದ್ ಅಹ್ಮದ್ ಅವರನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡಿದ ಆರೋಪದ ಮೇಲೆ ಸೇವೆಯಿಂದ ವಜಾಗೊಳಿಸಿದೆ.
ಈ ಮೂವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ, ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಒದಗಿಸುತ್ತಿದ್ದಾರೆ, ಭಯೋತ್ಪಾದಕ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ, ಭಯೋತ್ಪಾದಕರಿಗೆ ಹಣಕಾಸು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:Jawan; ನಯನತಾರಾ ‘ಚಂಡಮಾರುತದ ಮೊದಲು ಬರುವ ಗುಡುಗು’ ಎಂದ ಶಾರುಖ್
ಪಾಕಿಸ್ತಾನದ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ತನಿಖೆಯು ಸ್ಪಷ್ಟವಾಗಿ ದೃಢಪಡಿಸಿದ ನಂತರ ಎಲ್ಲಾ ಮೂರು ಸರ್ಕಾರಿ ನೌಕರರನ್ನು ವಜಾಗೊಳಿಸಲು ಸರ್ಕಾರವು ಭಾರತದ ಸಂವಿಧಾನದ 311 (2) (ಸಿ) ಅನ್ನು ಅನ್ವಯಿಸಿದೆ. ಈ ಮೂವರನ್ನು ವಜಾಗೊಳಿಸುವುದರೊಂದಿಗೆ ಇದೀಗ ವಜಾಗೊಂಡವರ ಸಂಖ್ಯೆ 52ಕ್ಕೆ ತಲುಪಿದೆ.
ಭಾರತೀಯ ಸೇನೆಯು ಸೋಮವಾರ ಪೂಂಚ್ ನಲ್ಲಿ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿದೆ. ಇಬ್ಬರು ನುಸುಳುಕೋರರನ್ನು ಕೊಂದಿದೆ.