Advertisement

ಪ್ರತ್ಯೇಕತಾವಾದಿಗಳ ಭದ್ರತೆ ಪುನರ್‌ ವಿಮರ್ಶೆ: ರಾಜನಾಥ್‌ ಸಿಂಗ್ ಆದೇಶ

01:44 PM Feb 15, 2019 | Team Udayavani |

ಶ್ರೀನಗರ : ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಪಾಕಿಸ್ಥಾನದಿಂದ ಹಣದ ನೆರವು ಪಡೆಯುತ್ತಿರುವ ದೇಶ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಪುನರ್‌ ವಿಮರ್ಶಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

Advertisement

‘ಜಮ್ಮು ಕಾಶ್ಮೀರದಲ್ಲಿ ಕೆಲವರಿಗೆ ಪಾಕ್‌ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿದೆ ಮಾತ್ರವಲ್ಲ ಅಲ್ಲಿನ ಗುಪ್ತಚರ ಜಾಲದೊಂದಿಗೂ ನಂಟಿದೆ; ಇವರು ಪಾಕಿಸ್ಥಾನ ಮತ್ತು ಐಎಸ್‌ಐ ನಿಂದ ಹಣ ತೆಗೆದುಕೊಳ್ಳುತ್ತಾರೆ. ಈ ರೀತಿಯ ಜನರಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಪುನರ್‌ ವಿಮರ್ಶಿಸುವಂತೆ ನಾನು ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದರು. 

‘ಜಮ್ಮು ಕಾಶ್ಮೀರದಲ್ಲಿ ಕೆಲವರಿದ್ದಾರೆ; ಅವರು ಉಗ್ರ ಸಂಘಟನೆಗಳು ಮತ್ತು ಐಎಸ್‌ಐ ಜತೆಗೆ ಕೈಜೋಡಿಸಿಕೊಂಡಿದ್ದಾರೆ; ಅವರು ಭಯೋತ್ಪಾದನೆ ಪಿತೂರಿಯಲ್ಲೂ ಶಾಮೀಲಾಗಿದ್ದಾರೆ; ಅವರು ಜನರ ಭವಿಷ್ಯದೊಂದಿಗೂ ಆಟವಾಡುತ್ತಿದ್ದಾರೆ; ಮುಖ್ಯವಾಗಿ ಜಮ್ಮು ಕಾಶ್ಮೀರದ ಯುವಕರು’ ಎಂದು ರಾಜನಾಥ್‌ ಸಿಂಗ್‌ ಹರಿಹಾಯ್ದರು.

ಪ್ರತ್ಯೇಕತಾವಾದಿಗಳ ಹೆಸರನ್ನು ನೇರವಾಗಿ ಉಲ್ಲೇಖೀಸದ ರಾಜನಾಥ್‌ ಸಿಂಗ್‌, ‘ಕೆಲ ಪ್ರತ್ಯೇಕತಾವಾದಿಗಳು ಜಮ್ಮು ಕಾಶ್ಮೀರ ಕುರಿತ ಪಾಕ್‌ ಅಭಿಪ್ರಾಯವನ್ನು ಪ್ರತಿಧ್ವನಿಸುತ್ತಾರೆ. ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾಗಿರುವ 40 ಯೋಧರ ಬಲಿದಾನ ವ್ಯರ್ಥವಾಗಲು ನಾವು ಬಿಡುವುದಿಲ್ಲ; ಇದಕ್ಕೆ ಕಾರಣರಾದವರ ವಿರುದ್ಧ ನಾವು ಕಠಿನ ನಿಲುವು ತಳೆದಿದ್ದೇವೆ; ಅದನ್ನು ನಾವು ಸಾಕಾರಗೊಳಿಸಿಯೇ ತೀರುತ್ತೇವೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next