Advertisement

ಲಷ್ಕರ್‌ ಉಗ್ರರಿಂದ ಅಪಹರಿಸಲ್ಪಟ್ಟ ವ್ಯಕ್ತಿ ಶವವಾಗಿ ಪತ್ತೆ

04:07 PM Oct 06, 2018 | udayavani editorial |

ಶ್ರೀನಗರ : ಸೋಪೋರ್‌ ಪಟ್ಟಣದಲ್ಲಿ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ವ್ಯಕ್ತಿಯ ಶವವು ಕತ್ತು ಸೀಳಲ್ಪಟ್ಟ ಸ್ಥಿತಿಯಲ್ಲಿ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಉಗ್ರರಿಂದ ಹತನಾದ ವ್ಯಕ್ತಿಯನ್ನು ತೌಸೀಫ್ ಅಹ್ಮದ್‌ ಗನೀ (30) ಎಂದು ಗುರುತಿಸಲಾಗಿದೆ. ಈತನು ಸೋಪೋರ್‌ನ ತುಜ್ಜಾರ್‌ ಪ್ರದೇಶದ ನಿವಾಸಿ ಎಂದು ಗೊತ್ತಾಗಿದೆ. 

ತೌಸೀಫ್ ಅಹ್ಮದ್‌ ಅಪಹರಣ ಮತ್ತು ಹತ್ಯೆಯು ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ ಕೃತ್ಯವೆಂದು ತಿಳಿಯಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next