ಮುಂಬಯಿ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಸ್ ವಿಕಾಸ್ ಅಘಾಡಿ (ಎಂವಿಎ) ಪರ ಪ್ರಚಾರ ಮಾಡುವುದಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಭಾನುವಾರ(ಸೆ22) ಹೇಳಿದ್ದಾರೆ.
ಸತ್ಯಪಾಲ್ ಮಲಿಕ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಮುಂಬೈನ ನಿವಾಸದಲ್ಲಿ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ‘ರಾಜ್ಯದಲ್ಲಿ ವಿರೋಧ ಪಕ್ಷಕ್ಕೆ ಸೇರುವ ನಿರ್ಧಾರವನ್ನು ಪ್ರಕಟಿಸಿ, ಆಡಳಿತಾರೂಢ ಬಿಜೆಪಿಯನ್ನು “ಅಳಿಸಿ ಹಾಕಲಾಗುವುದು” ಎಂದು ಹೇಳಿದ್ದಾರೆ.
“ಬಿಜೆಪಿಗೆ ಕೇವಲ ದೊಡ್ಡ ಹೊಡೆತ ಬೀಳುವುದಿಲ್ಲ, ಚುನಾವಣೆಯಲ್ಲಿ ಪಕ್ಷವು ನಾಶವಾಗಲಿದೆ. ಈ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಪ್ರಮುಖ ಪಾತ್ರ ವಹಿಸುತ್ತಾರೆ, ನೀವು ಚಿಂತಿಸಬೇಕಾಗಿಲ್ಲ” ಎಂದರು.
ಕ್ರಾಂತಿ ದಳ, ಜನತಾ ದಳ, ಕಾಂಗ್ರೆಸ್, ಲೋಕದಳ, ಸಮಾಜವಾದಿ ಪಕ್ಷಗಳನ್ನು ತೊರೆದಿದ್ದ ಸತ್ಯಪಾಲ್ ಮಲಿಕ್ ಬಿಜೆಪಿ ಸೇರ್ಪಡೆಯಾಗಿದ್ದರು. ಬಳಿಕ ಬಿಹಾರ, ಒಡಿಶಾ, ಗೋವಾ, ಜಮ್ಮು& ಕಾಶ್ಮೀರ ಮತ್ತು ಮೇಘಾಲಯದ ರಾಜ್ಯಪಾಲರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.