Advertisement

ಉಗ್ರರು ಭ್ರಷ್ಟ ರಾಜಕಾರಣಿಗಳನ್ನು ಗುಂಡಿಟ್ಟು ಕೊಲ್ಲಬೇಕು;ಜಮ್ಮು-ಕಾಶ್ಮೀರ್ ರಾಜ್ಯಪಾಲ

09:04 AM Jul 23, 2019 | Nagendra Trasi |

ಶ್ರೀನಗರ್:ಅಮಾಯಕ ಜನರು ಮತ್ತು ಯೋಧರನ್ನು ಹೊರತುಪಡಿಸಿ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳನ್ನು ಭಯೋತ್ಪಾದಕರು ಕೊಂದು ಬಿಡಬೇಕು ಎಂಬ ಜಮ್ಮು-ಕಾಶ್ಮೀರ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲಿಕ್ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Advertisement

“ತಮ್ಮ ಕೈಗೆ ಬಂದೂಕನ್ನು ಎತ್ತಿಕೊಂಡಿರುವ ಈ ಹುಡುಗರು (ಉಗ್ರರು) ತಮ್ಮದೇ ಜನರನ್ನು ಕೊಲ್ಲುತ್ತಿದ್ದಾರೆ. ಭದ್ರತಾ ಅಧಿಕಾರಿಗಳನ್ನು, ವಿಶೇಷ ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈಯುತ್ತಿದ್ದಾರೆ. ನೀವು ಯಾಕೆ ಅವರನ್ನು ಕೊಲ್ಲುತ್ತಿದ್ದೀರಿ? ಯಾರು ಕಾಶ್ಮೀರದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೋ ಅವರನ್ನು ಕೊಂದು ಬಿಡಿ ಎಂದು ಮಲಿಕ್ ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು!

ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸುತ್ತಿದ್ದಂತೆಯೇ ಸೋಮವಾರ ಸ್ಪಷ್ಟನೆ ನೀಡಿದ ರಾಜ್ಯಪಾಲ ಮಲಿಕ್ ಅವರು, ರಾಜಕಾರಣಿಗಳ ಭ್ರಷ್ಟಾಚಾರಕ್ಕೆ ರೋಸಿ ಹೋಗಿ ಆಕ್ರೋಶ ಮತ್ತು ಒತ್ತಡಕ್ಕೊಳಗಾಗಿ ನಾನು ಆ ರೀತಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.

ಒಬ್ಬ ರಾಜ್ಯಪಾಲರಾಗಿ ನಾನು ಅಂತಹ ಹೇಳಿಕೆಯನ್ನು ನೀಡಬಾರದು. ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಅದೇ ಆಗಿದೆ. ಹಲವಾರು ರಾಜಕೀಯ ಮುಖಂಡರು, ದೊಡ್ಡ, ದೊಡ್ಡ ಅಧಿಕಾರಿಗಳು ಇಲ್ಲಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next