Advertisement

ಜಮ್ಮು ಕಾಶ್ಮೀರದ ತೆಹರೀಕ್‌ ಉಲ್‌ ಮುಜಾಹಿದೀನ್‌ ಸಂಘಟನೆಗೆ ನಿಷೇಧ

06:33 AM Feb 06, 2019 | Team Udayavani |

ಹೊಸದಿಲ್ಲಿ : ಕಾಶ್ಮೀರ ವಿಮೋಚನೆಗಾಗಿ ಹೋರಾಡುವ ನೆಪದಲ್ಲಿ ಹಲವಾರು ಸರಣಿ ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿರುವ ಜಮ್ಮು ಕಾಶ್ಮೀರದಲ್ಲಿನ ತೆಹರೀಕ್‌ ಉಲ್‌ ಮುಜಾಹಿದೀನ್‌ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ.

Advertisement

ಈ ಸಂಬಂಧ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಜಮ್ಮು ಕಾಶ್ಮೀರದ ತೆಹರೀಕ್‌ ಉಲ್‌ ಮುಜಾಹಿದೀನ್‌ ಸಂಘಟನೆಯು ಭಾರತದಲ್ಲಿ ಹಲವಾರು ಸರಣಿ ಉಗ್ರ ಕೃತ್ಯಗಳಲ್ಲಿ ಶಾಮೀಲಾಗಿರುವುದು ಖಚಿತವಿದ್ದು ಇದರ ಸದಸ್ಯರಿಗೆ ವಿದೇಶದಲ್ಲಿರುವ ನಿರ್ವಾಹಕರಿಂದ ಹಣಕಾಸು ಮತ್ತು ಸಾರಿಗೆ ಸೌಕರ್ಯದ ನೆರವು ದೊರಕುತ್ತಿರುವುದು ಕಂಡು ಬಂದಿದೆ ಎಂದು ಹೇಳಿದೆ.

ಕಾಶ್ಮೀರ ವಿಮೋಚನೆಯ ಉದ್ದೇಶದೊಂದಿಗೆ 1990ರಲ್ಲಿ ಅಸ್ತಿತ್ವಕ್ಕೆ ಬಂದ ತೆಹರೀಕ್‌ ಉಲ್‌ ಮುಜಾಹಿದೀನ್‌ ಅನೇಕ ಸರಣಿ ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿರುವುದು ಕಂಡು ಬಂದಿದೆ ಎಂದು ಸಚಿವಾಲಯದ ಅಧಿಸೂಚನೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next