Advertisement

Haryana: ದುಷ್ಕರ್ಮಿಗಳಿಂದ ಜೆಜೆಪಿ ನಾಯಕನ ಗುಂಡಿಕ್ಕಿ ಹತ್ಯೆ… ಪೊಲೀಸರಿಂದ ಶೋಧ

09:16 AM Jul 11, 2024 | Team Udayavani |

ಹರಿಯಾಣ: ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ನಾಯಕನನ್ನು ಮೂವರು ದುಷ್ಕರ್ಮಿಗಳ ತಂಡ ಗುಂಡಿಕ್ಕಿ ಹತ್ಯೆಗೈರುವ ಘಟನೆ ಹರ್ಯಾಣದ ಹನ್ಸಿಯಲ್ಲಿ ಬುಧವಾರ ಸಂಜೆ ನಡೆದಿದೆ.

Advertisement

ಮೃತರನ್ನು ಹಿಸಾರ್‌ನ ಹಂಸಿಯ ರವೀಂದರ್ ಸೈನಿ ಎಂದು ಗುರುತಿಸಲಾಗಿದ್ದು,ಸೈನಿ ಅವರು ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಯಾಗಿದ್ದರು ಎನ್ನಲಾಗಿದೆ. ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸೈನಿ ತನ್ನ ಗನ್‌ಮ್ಯಾನ್‌ನೊಂದಿಗೆ ತನ್ನ ಶೋರೂಮ್‌ನಿಂದ ಹೊರಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಸೈನಿ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ರವೀಂದರ್ ಸೈನಿ, ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಹನ್ಸಿಯ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅಷ್ಟೋತ್ತಿಗಾಗಲೇ ಸೈನಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ರವೀಂದರ್ ಸೈನಿ ಅವರು ಹನ್ಸಿಯಲ್ಲಿರುವ ಹೀರೋ ಮೋಟಾರ್‌ಸೈಕಲ್ ಶೋರೂಂ ನ ಮಾಲೀಕರಾಗಿದ್ದಾರೆ ಸಂಜೆ 6 ಗಂಟೆಗೆ ತಮ್ಮ ಕಚೇರಿಯಿಂದ ಹೊರಗೆ ಬಂದು ಫೋನ್ ಕರೆ ಮಾಡುತ್ತಿದ್ದಾಗ ಮೂವರು ಅಪರಿಚಿತ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹನ್ಸಿ ನಗರ ಪೊಲೀಸ್ ಠಾಣೆ ಗೃಹ ಅಧಿಕಾರಿ (ಎಸ್‌ಎಚ್‌ಒ) ಜಗಜಿತ್ ಸಿಂಗ್ ಹೇಳಿದ್ದಾರೆ.

Advertisement

ಮೂರೂ ವರ್ಷಗಳ ಹಿಂದೆ ಸೈನಿ ಅವರನ್ನು ಕೊಲ್ಲುವ ವಿಫಲ ಯತ್ನ ನಡೆದಿತ್ತು ಇದಾದ ಬಳಿಕ ಸೈನಿ ಅವರು ಗನ್ ಮ್ಯಾನ್ ಇಟ್ಟುಕೊಂಡಿದ್ದರು ಬುಧವಾರವೂ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಓದುವ ಸಂದರ್ಭ ಗನ್ ಮ್ಯಾನ್ ಸೈನಿ ಜೊತೆಗಿದ್ದರು ಆದರೆ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದ ಕಾರಣ ದುಷ್ಕರ್ಮಿಗಳ ಮೇಲೆ ಗುಂಡು ಹರಿಸಲು ಸಾಧ್ಯವಾಗಲಿಲ್ಲ ಎಂದು ಗನ್ ಮ್ಯಾನ್ ಹೇಳಿಕೆ ನೀಡಿದ್ದಾರೆ. ಸದ್ಯ ಸೈನಿ ಅವರ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗಿದೆ.

ಇನ್ನು ಘಟನೆ ಕುರಿತು ಹರ್ಯಾಣ ಮುಖ್ಯಮಂತ್ರಿ (ಸಿಎಂ) ನಯಾಬ್ ಸಿಂಗ್ ಅವರು ರವೀಂದರ್ ಸೈನಿ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ, ದಾಳಿಕೋರರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಘಟನೆ ಸಂಬಂಧ ಜೆಜೆಪಿ ನಾಯಕನ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಗನ್‌ಮ್ಯಾನ್‌ನನ್ನು ಅಮಾನತುಗೊಳಿಸಲಾಗಿದ್ದು ಅಲ್ಲದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Lokayukta Raid: ಬೆಳ್ಳಂ ಬೆಳಗ್ಗೆ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

Advertisement

Udayavani is now on Telegram. Click here to join our channel and stay updated with the latest news.

Next