Advertisement

ಭಾರತದ ಸೇನಾ ನೆಲೆ ಧ್ವಂಸ ಪಾಕ್‌ ವಿಡಿಯೋ ಬಿಡುಗಡೆ, ಅದು ನಕಲಿ !

11:37 AM May 25, 2017 | Team Udayavani |

ನವದೆಹಲಿ: ನಿಯಂತ್ರಣ ರೇಖೆಯಲ್ಲಿ ಪಾಕ್‌ ನೆಲೆ ಧ್ವಂಸಗೊಳಿಸಿದ್ದಾಗಿ ಭಾರತ ಹೇಳಿದ ಮಾರನೇ ದಿನ, ಮೇ 13ರಂದು ನಾವೂ ಭಾರತದ ನೆಲೆಗಳನ್ನು ಧ್ವಂಸಗೊಳಿಸಿದ್ದಾಗಿ ಪಾಕ್‌ ಸೇನೆ ಹೇಳಿದೆ. ನಮ್ಮ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದ ಭಾರತದ ಬಂಕರ್‌ಗಳನ್ನು ನಾಶ ಮಾಡಿದ್ದಾಗಿ ಅದು ಹೇಳಿದೆ. ಈ ಬಗ್ಗೆ 87 ಸೆಕೆಂಡ್‌ಗಳ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

Advertisement

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಸ್ತೃತ ಹೇಳಿಕೆಯನ್ನು ಪಾಕ್‌ ಸೇನಾ ವಕ್ತಾರ ಮೇಣ ಜಣ ಆಸಿಫ್ಗ ಫ‌ೂರ್‌ ಪೋಸ್ಟ್‌  ಮಾಡಿದ್ದಾರೆ. ಆದರೆ ಪಾಕ್‌ ಸೇನೆ ಬಿಡುಗಡೆ ಮಾಡಿದ ಈ ವಿಡಿಯೋ ಸಂಪೂರ್ಣ ನಕಲಿ ಎಂದು ಭಾರತೀಯ ಸೇನೆ ಹೇಳಿದೆ. ವಿಡಿಯೋದಲ್ಲಿರುವ ಕಟ್ಟಡಗಳು ಬುಲೆಟ್‌ ತಡೆಯುವಷ್ಟು ಗಟ್ಟಿಮುಟ್ಟಾಗಿ ಕಾಣುತ್ತಿವೆ. ಜತೆಗೆ ಮೋರ್ಟರ್‌, ಫಿರಂಗಿ ದಾಳಿಯಾದರೆ ಮೇಲ್ಭಾಗದಲ್ಲಿ ಸ್ಫೋಟವಾಗುತ್ತದೆ. 

ಆದರೆ ವಿಡಿಯೋದಲ್ಲಿ ಸುಧಾರಿತ ಸ್ಫೋಟಕದಿಂದಾದಂತೆ ಕೆಳಭಾಗದಿಂದ ಸ್ಫೋಟವಾಗಲ್ಲ. ಆದ್ದರಿಂದ ಇದು ನಕಲಿ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next