Advertisement

ಗ್ರಾಹಕರಿಗೆ ದೀಪಾವಳಿ ಧಮಾಕಾ: ಜಿಯೋಫೋನ್ ಈಗ ಕೇವಲ 699 ರೂಪಾಯಿಗೆ ಲಭ್ಯ!

11:59 AM Oct 05, 2019 | Nagendra Trasi |

ಮುಂಬೈ: ಇಂದಿನ ಸಂಪರ್ಕ ಜಗತ್ತಿನಲ್ಲಿ, ಆಹಾರ, ವಸ್ತ್ರ ಹಾಗೂ ಸೂರಿನ ಹಾಗೆಯೇ ಕೈಗೆಟುಕುವ ಬೆಲೆಯ ಅಂತರಜಾಲ ಸಂಪರ್ಕವೂ ಮನುಷ್ಯನ ಮೂಲಭೂತ ಅಗತ್ಯ   ಹಾಗೂ ಮೂಲಭೂತ ಮಾನವ ಹಕ್ಕು ಕೂಡ ಆಗಿದೆ.

Advertisement

ಹೀಗಾಗಿಯೇ ದೇಶಾದ್ಯಂತ ವಾಯ್ಸ್ ಕಾಲಿಂಗ್ ಜೊತೆಗೆ ಡೇಟಾ ಸೇವೆಗಳೂ ಅದರ ಅಗತ್ಯವಿರುವ ಭಾರತೀಯರ ಕೈಗೆಟುಕುವಂತೆ ಜಿಯೋ ನೋಡಿಕೊಂಡಿದೆ. ಇತರ ಸೇವಾದಾರರು ಕಡಿಮೆ ಗುಣಮಟ್ಟದ 2ಜಿ ಡೇಟಾಗಾಗಿ ಪ್ರತಿ ಜಿಬಿಗೆ ರೂ. 500ಕ್ಕೂ ಹೆಚ್ಚಿನ ಶುಲ್ಕ ವಿಧಿಸಿದರೆ, ಜಿಯೋ ತನ್ನ ಸಂಪೂರ್ಣ 4ಜಿ ಜಾಲದಲ್ಲಿ ಅತ್ಯುನ್ನತ ಗುಣಮಟ್ಟದ ಡೇಟಾ ಸೇವೆಯನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಅಲ್ಲದೆ, ಪ್ರಪಂಚದಲ್ಲೇ ಅತ್ಯಂತ ಕಡಿಮೆ ಬೆಲೆಯ 4ಜಿ ಬೆಂಬಲಿಸುವ ಸ್ಮಾರ್ಟ್‌ಫೋನನ್ನು ಜಿಯೋ ಭಾರತೀಯ ಜನಸಾಮಾನ್ಯರಿಗೆ ಲಭ್ಯವಾಗಿಸಿದೆ.

ಎಲ್ಲ ಭಾರತೀಯರು ಸಂಪೂರ್ಣ ಡಿಜಿಟಲ್ ಒಳಗೊಳ್ಳುವಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಜಿಯೋ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಇಂದು, ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ಒಂದು ಬಾರಿಯ ವಿಶೇಷ ಕೊಡುಗೆಯನ್ನು ಜಿಯೋ ಪ್ರಕಟಿಸಿದೆ.

ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಜಿಯೋಫೋನ್ ಕೇವಲ 699 ರೂ. ವಿಶೇಷ ಬೆಲೆಯಲ್ಲಿ ದೊರಕಲಿದೆ. 1,500 ರೂ. ಸಾಮಾನ್ಯ ಬೆಲೆಯ ಹೋಲಿಕೆಯಲ್ಲಿ ಇದು 800 ರೂಪಾಯಿ ಉಳಿತಾಯವಾಗಲಿದ್ದು, ಇದಕ್ಕೆ ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಬೇಕಾದ ವಿಶೇಷ ನಿಬಂಧನೆಯೂ ಇಲ್ಲ.

ಜಿಯೋಫೋನ್ ಕೊಳ್ಳಲು ಹಾಗೂ 2ಜಿಯಿಂದ 4ಜಿ ಡೇಟಾ ಜಗತ್ತಿಗೆ ಪ್ರವೇಶಿಸಲು ಜಿಯೋಫೋನ್ ಗ್ರಾಹಕರು ವ್ಯಯಿಸುವ 700 ರೂ. ಮೊತ್ತಕ್ಕೆ ಪ್ರತಿಯಾಗಿ, ಜಿಯೋ ತನ್ನ ಕಡೆಯಿಂದಲೂ ಒಂದು ಹೂಡಿಕೆಯ ಆಫರ್ ನೀಡುತ್ತಿದೆ.

Advertisement

ದೀಪಾವಳಿ 2019 ಕೊಡುಗೆಯ ಮೂಲಕ  ಜಿಯೋಗೆ ಸೇರುವ ಜಿಯೋಫೋನ್ ಗ್ರಾಹಕರಿಗೆ ಜಿಯೋ ವತಿಯಿಂದ 700 ರೂ. ಮೌಲ್ಯದ ಡೇಟಾ ಲಾಭ ದೊರಕಲಿದೆ. ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್‌ಗಳಿಗೆ, ತಲಾ 99 ರೂ. ಮೌಲ್ಯದ ಡೇಟಾವನ್ನು ಜಿಯೋ ಹೆಚ್ಚುವರಿಯಾಗಿ ನೀಡಲಿದೆ.

700 ರೂ. ಮೌಲ್ಯದ ಈ ಹೆಚ್ಚುವರಿ ಡೇಟಾದಿಂದ ಮನರಂಜನೆ, ಪಾವತಿಗಳು, ಇ ಕಾಮರ್ಸ್, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್, ಕೃತಕ ಬುದ್ಧಿಮತ್ತೆಯ (ಎಐ) ಆ್ಯಪ್‌ಗಳು ಮತ್ತಿತರ ಅನೇಕ ಸವಲತ್ತುಗಳ ಹಿಂದೆಂದೂ ನೋಡಿರದ ಜಗತ್ತನ್ನು ಪ್ರವೇಶಿಸುವುದು ಜಿಯೋಫೋನ್ ಗ್ರಾಹಕರಿಗೆ ಸಾಧ್ಯವಾಗಲಿದೆ.

ಜಿಯೋಫೋನ್ ಮೇಲೆ 800 ರೂ. ಉಳಿತಾಯ ಹಾಗೂ 700 ರೂ. ಮೌಲ್ಯದ ಡೇಟಾ ಸೇರಿ ಪ್ರತಿ ಜಿಯೋಫೋನ್ ಮೇಲೆ 1,500 ರೂ. ಲಾಭ ದೊರಕುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಇಂಡಿಯಾಗಾಗಿ 1,500 ರೂಪಾಯಿ ಈ ಲಾಭ ಜಿಯೋದ ದೀಪಾವಳಿ ಉಡುಗೊರೆಯಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಮುಖೇಶ್ ಡಿ. ಅಂಬಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next