Advertisement

ಮಕರ ಸಂಕ್ರಾಂತಿಯ ಶುಭ ದಿನ: ಉಡುಪಿ, ವಿಜಯಪುರ, ಕಲಬುರಗಿ, ಬಳ್ಳಾರಿಯಲ್ಲಿ ಜಿಯೋ ಟ್ರೂ 5ಜಿ ಆರಂಭ

10:35 PM Jan 14, 2023 | Team Udayavani |

ಬೆಂಗಳೂರು: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಶನಿವಾರದಂದು ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ಸೇವೆಗಳನ್ನು ಕರ್ನಾಟಕದ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿ, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್‌ಗಢ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಪ್ರಾರಂಭಿಸಿದೆ.

Advertisement

ರಿಲಯನ್ಸ್ ಜಿಯೋ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿ ಮತ್ತು ಇತರ 15 ನಗರಗಳಲ್ಲಿ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆಯನ್ನು ಘೋಷಿಸಿದೆ. ಅಂದ ಹಾಗೆ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿಯಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ

“ಈ ಹೊಸ ಟ್ರೂ 5ಜಿ-ಚಾಲಿತ ನಗರಗಳು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ, ವಾಣಿಜ್ಯ ಮತ್ತು ಕೈಗಾರಿಕಾ ತಾಣಗಳಾಗಿವೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶಗಳ ಗ್ರಾಹಕರು ಅತ್ಯುತ್ತಮ ದೂರಸಂಪರ್ಕ ಸೇವೆಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ ಎಂದು ಜಿಯೋ ಪ್ರಕಟಣೆ ತಿಳಿಸಿದೆ.

ಈ ಆರಂಭದ ಬಗ್ಗೆ ಮಾತನಾಡಿದ ಜಿಯೋ ವಕ್ತಾರರು, “ತಂತ್ರಜ್ಞಾನವು ಒಂದು ಉತ್ತಮ ಒಗ್ಗೂಡಿಸುವ ಸಾಧನವಾಗಿದೆ. ಮಕರ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಸೇರಿದಂತೆ ಹಬ್ಬಗಳನ್ನು ಆಚರಿಸುವ ಇಂತಹ ಮಂಗಳಕರ ಸಮಯದಲ್ಲಿ ಕರ್ನಾಟಕ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಎಂಟು ರಾಜ್ಯಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ಹೆಮ್ಮೆಪಡುತ್ತದೆ.

“ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್‌ಗಢ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ರಾಜ್ಯ ಸರ್ಕಾರಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ಜಿಯೋ ಟ್ರೂ 5ಜಿ ವ್ಯಾಪ್ತಿ ವಿಸ್ತರಿಸಲು ಮತ್ತು ಜಿಯೋ ಟ್ರೂ 5ಜಿ ತಂತ್ರಜ್ಞಾನದ ಪ್ರಯೋಜನಗಳು ದೇಶಾದ್ಯಂತ ಬಳಕೆದಾರರನ್ನು ತಲುಪುವಂತೆ ಮಾಡಲು ನಮ್ಮ ಪ್ರಯತ್ನದಲ್ಲಿ ಎಲ್ಲ ರಾಜ್ಯಗಳ ಸರ್ಕಾರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

Advertisement

ಜನವರಿ 14ರಿಂದ ಕರ್ನಾಟಕದ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿ, ಛತ್ತೀಸ್‌ಗಢ (ರಾಯಪುರ, ದುರ್ಗ್, ಭಿಲಾಯಿ), ಬಿಹಾರ (ಪಾಟ್ನಾ, ಮುಜಾಫರ್‌ಪುರ), ಜಾರ್ಖಂಡ್ (ರಾಂಚಿ, ಜಮ್ಷೆಡ್‌ಪುರ), ಒಡಿಶಾ (ರೂರ್ಕೆಲಾ ಮತ್ತು ಬ್ರಹ್ಮಪುರ), ಕೇರಳ (ಕೊಲ್ಲಂ), ಆಂಧ್ರಪ್ರದೇಶ (ಎಲೂರು), ಮಹಾರಾಷ್ಟ್ರ (ಅಮರಾವತಿ) ಹೀಗೆ 8 ರಾಜ್ಯಗಳ, 16 ನಗರಗಳಲ್ಲಿ ಜಿಯೋ ಬಳಕೆದಾರರು ಜಿಯೋ ವೆಲ್ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ, ಇದರಲ್ಲಿ ಅವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾ ಪಡೆಯುತ್ತಾರೆ.

ಇದನ್ನೂ ಓದಿ: ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 5 ವರ್ಷ ಜೈಲು ಶಿಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next