ನವದೆಹಲಿ: ಏರ್‌ಟೆಲ್, ವೊಡಾಫೋನ್ ಸಂಸ್ಥೆಗಳು ಪ್ರಿಪೇಯ್ಡ್ ಗ್ರಾಹಕರಿಗೆ ಶೇ. 25 ಶುಲ್ಕ ಹೆಚ್ಚಿಸಿರುವ ಬೆನ್ನಲ್ಲೇ ಜಿಯೋ ಸಂಸ್ಥೆಯೂ ತನ್ನ ಗ್ರಾಹಕರಿಗೆ ಕಹಿ ವಿಚಾರ ನೀಡಿದೆ.
ಇದೇ ಡಿ.1ರಿಂದ ಜಿಯೋ ಪ್ರಿಪೇಯ್ಡ್ ಗ್ರಾಹಕರ ಶುಲ್ಕವನ್ನು ಶೇ.21 ಹೆಚ್ಚಿಸಿರುವುದಾಗಿ ತಿಳಿಸಲಾಗಿದೆ.
ಸುಸ್ಥಿರ ಟೆಲಿಕಾಂ ಉದ್ಯಮವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಿಯೋ ಸಂಸ್ಥೆಯು ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಪ್ಲ್ಯಾನ್ ಗಳನ್ನು ಬಿಡುಗಡೆ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.
ಜಿಯೋಫೋನ್‌ಪ್ಲ್ಯಾನ್, ಅನ್‌ಲಿಮಿಟೆಡ್ ಪ್ಲ್ಯಾನ್ ಮತ್ತು ಡೇಟಾ ಆ್ಯಡ್ ಆನ್ ಪ್ಲ್ಯಾನ್ ಗಳ ಶುಲ್ಕವನ್ನು ಶೇ.19.6ರಿಂದ ಶೇ.21.3ರಷ್ಟು ಏರಿಕೆ ಮಾಡಲಾಗಿದೆ ಎಂದಿದೆ.
ಇದನ್ನೂ ಓದಿ:ವೈನ್ ಆರ್ಡರ್ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು