ದೇಶದಾದ್ಯಂತ ಡಿಜಿಟಲೀಕರಣವನ್ನು ಸಾಧ್ಯವಾಗಿಸುವ ಉದ್ದೇಶದಿಂದ, ಕೈಗೆಟುಕುವ ದರಗಳು ಸಾಧನಗಳು ಹಾಗೂ ಡಿಜಿಟಲ್ ಲೈಫ್ ಇಕೋಸಿಸ್ಟಂನ ವ್ಯಾಪಕ ಲಭ್ಯತೆಯೊಡನೆ, ಡಿಜಿಟಲ್ ಜೀವನದ ಅನುಕೂಲಗಳನ್ನು ಎಲ್ಲರಿಗೂ ದೊರಕಿಸುವುದನ್ನು ಜಿಯೋ ಮುಂದುವರೆಸುತ್ತಿದೆ. ಜಿಯೋ ಡಿಜಿಟಲ್ ಜೀವನವನ್ನು ತಮ್ಮ ಮನೆಗಳಿಂದಲೇ ಪ್ರಾರಂಭಿಸುವ ಅನುಕೂಲವನ್ನು ಹೋಮ್ ಡೆಲಿವರಿ ಚಾನೆಲ್ ಮೂಲಕ ಭಾರತೀಯರಿಗೆ ನೀಡುತ್ತಿರುವುದು ಇಂತಹುದೇ ಒಂದು ಉಪಕ್ರಮವಾಗಿದೆ.
ಕರ್ನಾಟಕದಲ್ಲಿ ಜಿಯೋ ಸಿಮ್‌ನ ಹೋಮ್ ಡೆಲಿವರಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಸಾಗರ ಮತ್ತು ಮೈಸೂರು ನಗರಗಳಲ್ಲಿ ಲಭ್ಯವಿದೆ. ಗ್ರಾಹಕರು https://www.jio.com/en-in/jio-home-delivery-book-appointment.html ಜಾಲತಾಣಕ್ಕೆ ಭೇಟಿಕೊಡುವ ಮೂಲಕ, ಇಲ್ಲವೇ ಶುಲ್ಕರಹಿತ ಸಂಖ್ಯೆ 1800 889 9999ಕ್ಕೆ ಕರೆಮಾಡಿ ಕೆಲವು ಪ್ರಾಥಮಿಕ ಮಾಹಿತಿ ನೀಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದು.
ಆನಂತರದಲ್ಲಿ ಗ್ರಾಹಕರನ್ನು ಸಂಪರ್ಕಿಸುವ ಜಿಯೋ ಮಾರಾಟ ಹಾಗೂ ಸೇವಾ ತಂಡ ಸಿಮ್ ಅನ್ನು ಅವರ ಮನೆ ಬಾಗಿಲಿಗೇ ತಲುಪಿಸಲಿದೆ. ಗ್ರಾಹಕರು ನೋಂದಣಿ ನಮೂನೆಯನ್ನು (ಕಸ್ಟಮರ್ ಅಕ್ವಿಸಿಶನ್ ಫಾರ್ಮ್) ಭರ್ತಿಮಾಡುವ ಜೊತೆಗೆ ಸಕ್ರಿಯಗೊಳಿಸುವ (ಆಕ್ಟಿವೇಶನ್) ಪ್ರಕ್ರಿಯೆಗೆ ಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಲಭ್ಯವಿರುವ ಟ್ಯಾರಿಫ್ ಪ್ಲಾನ್‌ಗಳ ಪೈಕಿ ತಮ್ಮ ಡಿಜಿಟಲ್ ಅಗತ್ಯಗಳಿಗೆ ಸರಿಹೊಂದುವುದನ್ನು ಗ್ರಾಹಕರು ಆಯ್ದುಕೊಳ್ಳಬಹುದು.
ಸೂಕ್ತ ಪರಿಶೀಲನೆಯ ನಂತರ ಸಿಮ್ ಅನ್ನು ಸಕ್ರಿಯಗೊಳಿಸಿದಾಗ, ಚಂದಾದಾರರು ಜಿಯೋ ಡಿಜಿಟಲ್ ಜೀವನದ ಅನುಕೂಲಗಳನ್ನು ಪಡೆದುಕೊಳ್ಳಲು ಶಕ್ತರಾಗುತ್ತಾರೆ. ಅಪರಿಮಿತ ವಾಯ್ಸ್ ಹಾಗೂ ಡೇಟಾ ಪ್ರಯೋಜನ, ವೀಡಿಯೋ ಕಾಲಿಂಗ್, ಮೆಸೇಜಿಂಗ್ ಹಾಗೂ ವೈವಿಧ್ಯಮಯ ಜಿಯೋ ಆಪ್‌ಗಳೂ ಸೇರಿದಂತೆ ಜಿಯೋ ಸೇವೆಗಳ ಇಡೀ ಗುಚ್ಛವನ್ನು ಚಂದಾದಾರರು ಆನಂದಿಸಬಹುದಾಗಿದೆ.
ಜಿಯೋಟೀವಿ (ಜನಪ್ರಿಯ ಆನ್ ದ ಗೋ, ಕ್ಯಾಚ್ ಅಪ್ ಟೀವಿ ಆಪ್), ಜಿಯೋ ಸಿನೆಮಾ, ಜಿಯೋಮ್ಯೂಸಿಕ್, ಜಿಯೋಮ್ಯಾಗ್ಸ್, ಜಿಯೋನ್ಯೂಸ್, ಜಿಯೋ ಎಕ್ಸ್‌ಪ್ರೆಸ್‌ನ್ಯೂಸ್, ಜಿಯೋಡ್ರೈವ್, ಜಿಯೋಸೆಕ್ಯೂರಿಟಿ ಮತ್ತಿತರ ಆಪ್‌ಗಳು ಜಿಯೋ ಪ್ರೀಮಿಯಂ ಆಪ್‌ಗಳ ಪಟ್ಟಿಯಲ್ಲಿವೆ.
ಕರ್ನಾಟಕದಾದ್ಯಂತ ಇರುವ ರಿಲಯನ್ಸ್ ಡಿಜಿಟಲ್ ಮಳಿಗೆಗಳು, ಜಿಯೋ ಔಟ್‌ಲೆಟ್‌ಗಳು ಹಾಗೂ ಜಿಯೋ ಪಾರ್ಟ್‌ನರ್ ರೀಟೇಲರ್‌ಗಳ ಮೂಲಕವೂ ಗ್ರಾಹಕರು ಜಿಯೋ ಡಿಜಿಟಲ್ ಜೀವನ ಪ್ರಾರಂಭಿಸಬಹುದು.