Advertisement
ಜಿಯೋ ಭಾರತ್ ಪ್ಲಾಟ್‌ಫಾರ್ಮ್ ಆರಂಭಿಕ ಹಂತದ ಫೋನ್‌ಗಳಲ್ಲಿ ಇಂಟರ್ ನೆಟ್ ಸೇವೆ ನೀಡುತ್ತದೆ. ಇದು ಜಿಯೋ ಪೇ ಮೂಲಕ ಯುಪಿಐ ಪೇ ಮಾಡುವ ಸೌಲಭ್ಯ ಹೊಂದಿದೆ. ಇದಲ್ಲದೇ ಜಿಯೋ ಸಿನಿಮಾ, ಜಿಯೋ ಸಾವ್ನ್ , ಎಫ್ ಎಂ ರೇಡಿಯೊ ಹೊಂದಿದೆ.
Related Articles
Advertisement
ಲಕ್ಷಾಂತರ ಸಂಖ್ಯೆಯಲ್ಲಿ ಇರುವ ಫೀಚರ್ ಫೋನ್ ಬಳಕೆದಾರರನ್ನು ಅಪ್‌ಗ್ರೇಡ್ ಮಾಡುವ ಗುರಿ ಹೊಂದಲಾಗಿದೆ.
6,500 ತಾಲೂಕಿನಾದ್ಯಂತ ಬೀಟಾ ಪ್ರಯೋಗ ನಡೆಯಲಿದೆ.
ಬೆಲೆ:
ಇಂಟರ್ ನೆಟ್-ಸಕ್ರಿಯಗೊಳಿಸಿದ ಫೋನ್‌ಗೆ ಆರಂಭಿಕ ಬೆಲೆ ಕೇವಲ ರೂ. 999, ಇತರೆ ಆಪರೇಟರ್‌ಗಳ ಫೀಚರ್ ಫೋನ್ ಆಫರ್ ಗಳಿಗೆ ಹೋಲಿಸಿದರೆ ಶೇ 30ರಷ್ಟು ಅಗ್ಗದ ಮಾಸಿಕ ಯೋಜನೆ ಮತ್ತು 7 ಪಟ್ಟು ಹೆಚ್ಚು ಡೇಟಾ ದೊರೆಯುತ್ತದೆ.
ಅನ್ ಲಿಮಿಟೆಡ್ ಧ್ವನಿ ಕರೆಗಳಿಗೆ ತಿಂಗಳಿಗೆ ರೂ. 123 ಮತ್ತು 14 ಜಿಬಿ ಡೇಟಾ ಸಿಗಲಿದೆ. ಇತರ ಆಪರೇಟರ್‌ಗಳದು ಧ್ವನಿ ಕರೆಗಳು ಮತ್ತು 2GB ಡೇಟಾ ಪ್ಲಾನ್ ರೂ. 179 ರೂ ಇದೆ.
ಜಿಯೋ ಭಾರತ್ ಪ್ಲಾಟ್ ಫಾರ್ಮ್ ಮೂಲಕ ‘2ಜಿ ಮುಕ್ತ ಭಾರತ’ಕ್ಕೆ ರಿಲಯನ್ಸ್ ಮುಂದಾಗಿದೆ.