Advertisement
ಮತ್ತು ಇಂದೇ ಇತರ ರಾಜ್ಯಗಳ ಪ್ರಮುಖ ನಗರಗಳಲ್ಲಿ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆ ಘೋಷಿಸಿತು. ಅಂದ ಹಾಗೆ ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.
Related Articles
Advertisement
ಇದನ್ನೂ ಓದಿ:ಔಷಧಗಳನ್ನು ಬಿಟ್ಟುಬಿಡಬೇಡಿ…ಮಧುಮೇಹಿಗಳ ಆರೋಗ್ಯದ ಗುಟ್ಟು
ಜಿಯೋ ಇಂಜಿನಿಯರ್‌ಗಳು ಟ್ರೂ-5ಜಿ ಪ್ರಯೋಜನಗಳನ್ನು ಪ್ರತಿಯೊಬ್ಬ ಭಾರತೀಯರಿಗೂ ತಲುಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದ ನಮ್ಮ ಮಹಾನ್ ದೇಶದ ಪ್ರತಿ ನಾಗರಿಕರು ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಅದ್ಭುತ ಪ್ರಯೋಜನಗಳನ್ನು ಅನುಭವಿಸಬಹುದು.
“ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿಯನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಜನವರಿ 10ರಿಂದ ಕರ್ನಾಟಕ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು), ಅಲ್ಲದೇ, ಕೇರಳ (ಚೇರ್ತಲ), ತೆಲಂಗಾಣ (ವಾರಂಗಲ್, ಕರೀಂನಗರ), ಅಸ್ಸಾಂ (ಗುವಾಹತಿ) ಮತ್ತು ಮಹಾರಾಷ್ಟ್ರ (ಸೋಲಾಪುರ) 5 ರಾಜ್ಯಗಳ ಎಂಟು ನಗರಗಳಲ್ಲಿ ಜಿಯೋ 5G ಸೇವೆ ಆರಂಭವಾಯಿತು. ಜಿಯೋ ವೆಲ್ಕಮ್ ಆಫರ್ ಮೂಲಕ ಗ್ರಾಹಕರು 1 ಜಿಬಿಪಿಎಸ್+ ವೇಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ ಡೇಟಾ ಅನುಭವಿಸಬಹುದಾಗಿದೆ.