Advertisement

ಜಿಯೋ 5ಜಿ ಸ್ಮಾರ್ಟ್‌ ಫೋನ್, ಜಿಯೋ ಬುಕ್ ಲ್ಯಾಪ್‌ ಟಾಪ್ ಸದ್ಯದಲ್ಲೆ ಮಾರುಕಟ್ಟೆಗೆ..?

02:56 PM Mar 22, 2021 | Team Udayavani |

ನವ ದೆಹಲಿ :  ಜಿಯೋ ತನ್ನ ಮೊದಲ 5 ಜಿ ಸ್ಮಾರ್ಟ್‌ ಫೋನ್ ಮತ್ತು ಲ್ಯಾಪ್‌ ಟಾಪ್ ಜಿಯೋಬುಕ್ ಅನ್ನು ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಬಿಡುಗಡೆ ಮಾಡಬಹುದೆಂದು ವರದಿಯೊಂದು ತಿಳಿಸಿದೆ.

Advertisement

ಸ್ಮಾರ್ಟ್ ಫೋನ್ ಅನ್ನು ಗೂಗಲ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ, ಮತ್ತು ಇದು ಆಂಡ್ರಾಯ್ಡ್ ಅಥವಾ ಆಂಡ್ರಾಯ್ಡ್ ಗೋ ಆಧಾರಿತ ಜಿಯೋ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ.

ಓದಿ :  ಮದ್ಯ ಸಾಗಿಸಲು ಮಾಡಿದ ಈ ಪ್ಲಾನ್ ನೋಡಿ : ಹುಬ್ಬೇರುವುದು ಗ್ಯಾರಂಟಿ..!

ಆಂಡ್ರಾಯ್ಡ್ ಗೋ ಎಂಬುದು ಗೂಗಲ್‌ ನ ಓಎಸ್ ಆಗಿದ್ದು, ಇದನ್ನು ಎಂಟ್ರಿ ಲೆವೆಲ್ ಹಾರ್ಡ್‌ ವೇರ್ ಹೊಂದಿರುವ ಸ್ಮಾರ್ಟ್‌ ಫೋನ್‌ ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಇನ್ನು, 4ಜಿ ಎಲ್ ಟಿ ಇ ಸಂಪರ್ಕದೊಂದಿಗೆ ಕಡಿಮೆ ಬೆಲೆಯ ಲ್ಯಾಪ್ ಟಾಪ್ ಜಿಯೋ ಬುಕ್ ನಿರ್ಮಿಸಲು ರಿಲಯನ್ಸ್ ಜಿಯೋ ಚೀನಾದ ಉತ್ಪಾದಕ ಬ್ಲೂಬ್ಯಾಂಕ್ ಸಂವಹನ ತಂತ್ರಜ್ಞಾನದೊಂದಿಗೆ ಪಾಲುದಾರಿಕೆ ಹೊಂದಿದೆ ಎಂಬ ವದಂತಿಗಳಿವೆ.

Advertisement

ಜಿಯೋ ಬುಕ್ ನ ಅಭಿವೃದ್ಧಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಆರಂಭವಾಗಿದೆ ಮತ್ತು ಏಪ್ರಿಲ್ ಎರಡನೇ ಅಥವಾ ಮೂರನೇ ವಾರದಲ್ಲಿ ಉತ್ಪನ್ನ ಮೌಲ್ಯಮಾಪನ ಪರೀಕ್ಷಾ ಹಂತವನ್ನು ತಲುಪುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ವಿಶೇಷತೆಗಳು ಏನು..?  

ರಿಲಯನ್ಸ್ ಜಿಯೋ ಬುಕ್  ಎಚ್ ಡಿ (1,366×768 ಪಿಕ್ಸೆಲ್‌ಗಳು) ಡಿಸ್ಪ್ಲೇ ಮತ್ತು ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 665 SoC ಅನ್ನು ಸ್ನಾಪ್‌ ಡ್ರಾಗನ್ ಎಕ್ಸ್ 12 4ಜಿ ಮೋಡೆಮ್‌ ನೊಂದಿಗೆ ಹೊಂದಿಸಲಿದೆ. ಸ್ಮಾರ್ಟ್‌ ಫೋನ್‌ ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳು ಮಿನಿ ಎಚ್‌ ಡಿ ಎಂ ಐ ಕನೆಕ್ಟರ್, ಡ್ಯುಯಲ್-ಬ್ಯಾಂಡ್ ವೈ ಫೈ ಮತ್ತು ಬ್ಲೂಟೂತ್ ಅನ್ನು ಒಳಗೊಂಡಿರಬಹುದು. ಲ್ಯಾಪ್‌ ಟಾಪ್ ಜಿಯೋ ಸ್ಟೋರ್, ಜಿಯೋ ಮೀಟ್ ಮತ್ತು ಜಿಯೋ ಪೇಜ್‌ ಗಳಂತಹ ಅಪ್ಲಿಕೇಶನ್‌ ಗಳನ್ನು ಸಹ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಓದಿ : ವಾಟ್ಸ್ಯಾಪ್ ಡಿಪಿ ಕದ್ದು ನೋಡುವವರರು ಯಾರೆಂದು ತಿಳಿಯಬೇಕೆ..? ‘ಈ’ ಆ್ಯಪ್ ಡೌನ್ಲೋಡ್ ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next