Advertisement

ಜಿನ್ಸನ್‌ ಜಾನ್ಸನ್‌ ಒಲಿಂಪಿಕ್ಸ್‌ಗೆ ಆಯ್ಕೆ ಕಷ್ಟ ?

12:28 AM Dec 08, 2019 | Team Udayavani |

ಹೊಸದಿಲ್ಲಿ: ಜಕಾರ್ತ ಏಶ್ಯನ್‌ ಗೇಮ್ಸ್‌ ನ 1,500 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಜಿನ್ಸನ್‌ ಜಾನ್ಸನ್‌ ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್‌ಗೆ ಅರ್ಹತೆ ಪಡೆಯುವ ಕನಸು ಬಹುತೇಕ ಅಸಾಧ್ಯ ಎನ್ನುವಂತಾಗಿದೆ. ಅಭ್ಯಾಸದ ವೇಳೆ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿ ವಿಶ್ರಾಂತಿಯ ಮೊರೆಹೋಗಿದ್ದಾರೆ.

Advertisement

ಜಾನ್ಸನ್‌ಗೆ ತೀವ್ರ ಪ್ರಮಾಣದ ಗಾಯ ಗಳಾಗಿದ್ದು ಮುಂದಿನ ಕೂಟದಲ್ಲಿ ಭಾಗವ ಹಿಸುವುದು ಕಷ್ಟಕರ. ಹೀಗಾಗಿ ಅವರ ಒಲಿಂಪಿಕ್‌ ಅರ್ಹತೆ ಕಷ್ಟಸಾಧ್ಯವೆಂದು ಆ್ಯತ್ಲೆಟಿಕ್‌ ಫೆಡ ರೇಶನ್‌ ಆಪ್‌ ಇಂಡಿಯಾ ತಿಳಿಸಿದೆ.

ಗಾಯದ ತೀವ್ರತೆ ಹೆಚ್ಚಾ ಗಿದೆ ಮತ್ತು ಒಲಿಂಪಿಕ್‌ ಅರ್ಹತೆ ಪಡೆಯಲು 1,500 ಮೀ. ಓಟವನ್ನು 3:35.00 ಸೆಕೆಂಡ್‌ ಒಳಗಡೆ ಗುರಿ ಮುಟ್ಟಬೇಕಾದುದರಿಂದ ಇದು ಅಸಾಧ್ಯವಾಗಿದೆ .

Advertisement

Udayavani is now on Telegram. Click here to join our channel and stay updated with the latest news.

Next