Advertisement

ಗಾಂಧೀಜಿ, ನೆಹರುಗೆ ಜಿನ್ನಾ ಹೋಲಿಕೆ

06:00 AM May 05, 2018 | |

ಗೋರಖ್‌ಪುರ: ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್‌ ಅಲಿ ಜಿನ್ನಾರನ್ನು ಜವಾಹರಲಾಲ್‌ ನೆಹರೂ ಹಾಗೂ ಮಹಾತ್ಮ ಗಾಂಧಿಗೆ ಹೋಲಿಸಿದ ಸಮಾಜವಾದಿ ಪಕ್ಷದ ಸಂಸದ ಪ್ರವೀಣ್‌ ನಿಷಾದ್‌ ಇದೀಗ ವಿವಾದಕ್ಕೀಡಾಗಿದ್ದಾರೆ. ಅಲಿಗಡ ಮುಸ್ಲಿಂ ವಿವಿಯಲ್ಲಿ ಜಿನ್ನಾ ಫೋಟೋ ಪ್ರದರ್ಶನ ವಿವಾದ ಸಂಬಂಧ ಮಾತನಾಡಿದ ನಿಷಾದ್‌, ಮಹಾತ್ಮ ಗಾಂಧಿ, ನೆಹರೂರಂತೆಯೇ ಜಿನ್ನಾ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂದಿದ್ದಾರೆ.

Advertisement

ಜಿನ್ನಾ ಹೆಸರಿನಲ್ಲಿ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ನೆಹರೂ ಹಾಗೂ ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದಷ್ಟೇ ಜಿನ್ನಾ ಕೂಡ ಶ್ರಮಿಸಿದ್ದಾರೆ ಎಂಬುದನ್ನು ನಿರಾಕರಿಸುವಂ ತಿಲ್ಲ. ಕೆಲವು ಧರ್ಮದವರು ಮಾತ್ರ ರಾಷ್ಟ್ರಪ್ರೇಮಿ ಗಳಾಗಿ ಗುರುತಿಸಿಕೊಳ್ಳುತ್ತಾರೆ ಎಂದಿದ್ದಾರೆ ನಿಷಾದ್‌.

ಇಂಟರ್‌ರ್ನೆಟ್‌ ಬಂದ್‌: ವಿವಿಯಲ್ಲಿ ಜಿನ್ನಾ ಫೋಟೋ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಕೆಲವು ದಿನಗಳಿಂದಲೂ ನಡೆಯುತ್ತಿದ್ದ ಪ್ರತಿಭಟನೆ  ಹಿಂಸಾರೂಪಕ್ಕೂ ತಿರುಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಚಂದ್ರ ಭೂಷಣ ಸಿಂಗ್‌ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next